ಕಾಪು : ಮಜೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಪಾಲಮೆ ನೂತನ ಬಸ್ಸು ತಂಗುದಾಣಕ್ಕೆ ಪಂಚಾಯತ್ ವರ್ಗ 1ರಲ್ಲಿ 2 ಲಕ್ಷ ರೂಪಾಯಿ ಅನುದಾನ ಮಂಜೂರಾಗಿ ಕಾಮಗಾರಿ ಪೂರ್ಣಗೊಂಡಿದ್ದು, ಇದರ ಉದ್ಘಾಟನೆಯನ್ನು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ನೆರವೇರಿಸಿ 9 ಲಕ್ಷ ರೂಪಾಯಿ ಅನುದಾನದಲ್ಲಿ ಖರೀದಿಸಿದ ಘನ ಮತ್ತು ದ್ರವ ಸಂಪನ್ಮೂಲ ನಿರ್ವಹಣೆ ವಾಹನಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಜೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರಸಾದ್ ಶೆಟ್ಟಿ ವಳದೂರ್, ಉಪಾಧ್ಯಕ್ಷರಾದ ಮಂಜುಳ ಆಚಾರ್ಯ, ಮಜೂರು ಗ್ರಾಮ ಪಂಚಾಯತ್ ಸದಸ್ಯರು ಶಿರ್ವ ಗ್ರಾಮ ಪಂಚಾಯತ್ ಸದಸ್ಯರು, ರೈತ ಮೋರ್ಚಾ ಅಧ್ಯಕ್ಷರಾದ ಕೃಷ್ಣ ರಾವ್, ಗಣೇಶ್ ಶೆಟ್ಟಿ, ಹೇರೂರ್ ನಿತ್ಯಾನಂದ ಆಚಾರ್ಯ, ಉಮೇಶ್ ಪ್ರಭು, ಪಾಲಮೆ ಗಣಪತಿ ಪ್ರಭು, ಪಾಲಮೆ ನಿತ್ಯಾನಂದ ಪ್ರಭು, ಪಾಲಮೆ ಸತೀಶ್ ಶೆಟ್ಟಿ, ನಾರಾಯಣ ಶೆಟ್ಟಿ ವಸಂತ್ ಪೂಜಾರಿ ಶಿರ್ವ ಮತ್ತು ಪಾದೂರು ಗ್ರಾಮದ ಗ್ರಾಮಸ್ಥರು ಉಪಸ್ಥಿತರಿದ್ದರು.
