Friday, July 25, 2025

spot_img

ಭೀಮ ಸಂಗಮ – ಸಾಮರಸ್ಯದ ಕಾರ್ಯಕ್ರಮ

ಪುತ್ತೂರು : ಭಾರತೀಯ ಜನತಾ ಪಕ್ಷದ ವರಿಷ್ಠರ ಆಶಯದಂತೆ ಸಂವಿಧಾನ ಗೌರವ ಅಭಿಯಾನದ ಅಂಗವಾಗಿ ವಿಧಾನಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಅವರ ಮನೆಯಲ್ಲಿ ಭೀಮಸಂಗಮ ಕಾರ್ಯಕ್ರಮ ಜರಗಿತು. ದಲಿತ ಸಮಾಜದ ಸುಮಾರು 120 ದಂಪತಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಕಿಶೋರ್ ಕುಮಾರ್, ಬಿಜೆಪಿ ನಗರ ಅಧ್ಯಕ್ಷರಾದ ಶಿವಕುಮಾರ್ ಭಟ್, ಗ್ರಾಮಾಂತರ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರ್ ಅವರುಗಳು ಎಲ್ಲಾ ದಂಪತಿಗಳ ಕಾಲ್ತೊಳೆದು ಅವರನ್ನು ಬರಮಾಡಿಕೊಂಡರು. ಮುತ್ತೈದೆಯರು ಅವರಿಗೆ ಬಾಗಿನ ಸಮರ್ಪಿಸಿ ಆರತಿ ಬೆಳಗಿದರು. ಸಾಮರಸ್ಯದ ಕುರಿತಾಗಿ ರವೀಂದ್ರ ಪುತ್ತೂರು ಹಾಗೂ ಶಿವ ಪ್ರಸಾದ ಇವರು ಉಪನ್ಯಾಸವನ್ನು ನಡೆಸಿಕೊಟ್ಟರು. ನಂತರ ಸಹಭೋಜನ ಕಾರ್ಯಕ್ರಮ.

ಜಾತಿ ಮತಗಳ ಸೀಮೆಯನ್ನು ಮೀರಿನಿಂತು ಎಲ್ಲರೂ ಊಟ ಮಾಡಿದರು, ಊಟವನ್ನು ಬಡಿಸಿದರು. ಜಾತಿಯ ಕಾರಣದಿಂದಾಗಿರುವ ಮೇಲರಿಮೆ, ಕೀಳರಿಮೆಗಳು ಇಲ್ಲಿ ಮಾಯವಾಗಿದ್ದವು. ಅಂಬೇಡ್ಕರ್ ಅವರ ಆಶಯದಂತೆ ಹಾಗೂ ಪಕ್ಷದ ವರಿಷ್ಠರ ಕಲ್ಪನೆಯಂತೆ ಒಂದು ಅದ್ಭುತ ಸಾಮರಸ್ಯದ ಕಾರ್ಯಕ್ರಮ ಇಲ್ಲಿ ಮೇಳೈಸಿತು.

ಕಾರ್ಯಕ್ರಮದಲ್ಲಿ ಬಿಜೆಪಿ ನಗರ ಅಧ್ಯಕ್ಷರಾದ ಶಿವಕುಮಾರ್ ಭಟ್, ಗ್ರಾಮಾಂತರ ಅಧ್ಯಕ್ಷರಾದ ದಯಾನಂದ ಶೆಟ್ಟಿ ಉಜಿರೆಮಾರ್, ರವೀಂದ್ರ ಪುತ್ತೂರು, ಜಯಲಕ್ಷ್ಮಿ ಶರ್ಗಿತ್ತಾಯ ಮಹಿಳಾ ಮಂಡಳ ಪ್ರಧಾನ ಕಾರ್ಯದರ್ಶಿ ಮುಂತಾದ ಪ್ರಮುಖರು ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles