ಬಾಲಿವುಡ್‌ನ ಖ್ಯಾತ ನಟ ಮಿಸ್ಟರ್ ಪರ್ಫೆಕ್ಷನಿಸ್ಟ್ ಅಮೀರ್ ಖಾನ್ ಅವರು ಕಂದು ಬಣ್ಣದ ಡ್ರೆಸ್ ಧರಿಸಿ ಭಿಕ್ಷುಕನಂತೆ ಬೀದಿಗಳಲ್ಲಿ ತಿರುಗಾಡುತ್ತಿರುವ ವೀಡಿಯೋವೊಂದು ವೈರಲ್ ಆಗಿದೆ. ನಟ ಅಮೀರ್ ಖಾನ್ ಎಂದು ಗೊತ್ತಿಲ್ಲದೇ ಜನರು ಈ ರೂಪ ನೋಡಿ ಹೆದರಿ ಓಡಿ ಹೋಗುತ್ತಿದ್ದಾರೆ. ಉದ್ದ ಕೂದಲು ಮತ್ತು ಗಡ್ಡ ಹೊಂದಿರುವ ಇವರು ಅಮೀರ್ ಖಾನ್ ಎಂದು ಯಾರೂ ಊಹಿಸಲು ಸಾಧ್ಯವಿಲ್ಲ. ಸೋಶಿಯಲ್ ಎಕ್ಸ್ ಪಿರಿಮೆಂಟ್ ಮಾಡಿದ್ರಾ ಬಿಟೌನ್ ಅಮಿರ್ ಖಾನ್. ಆದರೂ ವೈರಲ್ ಆಗ್ತಿದೆ ಅಮಿರ್ ಖಾನ್ ಭಿಕ್ಷುಕನ ವೇಷ! ಇದೇ ರೀತಿ 8ವರ್ಷಗಳ ಹಿಂದೆ ಇದೆ ರೀತಿ ಮಾರುವೇಶದಲ್ಲಿ ಕಾಣಿಸಿಕೊಂಡಿದ್ದ ಅಮಿರ್ ಖಾನ್. ಇದೀಗ ಮತ್ತೊಮ್ಮೆ ಭಿಕ್ಷುಕನ ವೇಷ ಧರಿಸಿ ಮುಂಬೈ ಗಲ್ಲಿ ಗಲ್ಲಿ ತಿರುಗಿದ್ದಾರೆ ಇನ್ನು ಅಮಿರ್ ಗೆ ಭಿಕ್ಷುಕನ ಮೇಕ್ ಅಪ್ ಮಾಡ್ತಿರುವ ಫೋಟೋ ಸಹ ವೈರಲ್ ಆಗಿದೆ.ಈ ಲುಕ್ ಯಾವ ಸಿನಿಮಾದ್ದು ಎಂಬುದು ಇನ್ನೂ ಬಹಿರಂಗವಾಗಿಲ್ಲ.