ಉಡುಪಿ : ಧರ್ಮಸ್ಥಳ ಎಸ್ ಐಟಿ ತನಿಖೆ ಪ್ರಕರಣದ ಒಂದಿಷ್ಟು ಬೆಳವಣಿಗೆಗಳ ನಡುವೆ ಇದೇ ವಿಚಾರದಿಂದ ಸೃಷ್ಟಿಯಾದ ಕೆಲವು ವಿಚಾರಗಳ ಹಿನ್ನಲೆಯಲ್ಲಿ ಬ್ರಹ್ಮಾವರ ಮತ್ತು ಕೋಟ ಠಾಣೆಯಲ್ಲಿ ಒಟ್ಟು ಎರಡು ಪ್ರಕರಣಗಳು ದಾಖಲಾಗಿವೆ.
ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ವಿರುದ್ಧ ವಾಗ್ದಾಳಿ ನಡೆಸುವ ಸಂದರ್ಭದಲ್ಲಿ ಅವಾಚ್ಯವಾಗಿ ನಿಂದಿಸಲಾಗಿದೆ ಎಂದು ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಮೇಲೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಿಮರೋಡಿ ಅವರ ನಿಂದನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು, ಇದರಿಂದ ಹಿಂದೂ ಧರ್ಮದ ನಾಯಕನ ನಿಂದನೆ ಮಾಡಲಾಗುತ್ತಿದರ ಎಂದು ಗ್ರಾಮಾಂತರ ಬಿಜೆಪಿ ಮಂಡಲ ಅಧ್ಯಕ್ಷ ರಾಜೀವ್ ಕುಲಾಲ್ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಹೋರಾಟಗಾರ ವಸಂತ ಗಿಳಿಯಾರ್, ಫೇಸ್ ಬುಕ್ ನಲ್ಲಿ ಧರ್ಮಸ್ಥಳ ಕ್ಷೇತ್ರದ ಮ್ಯಾಪ್ ಹಾಕಿ ದೇವಸ್ಥಾನ ಮತ್ತು ಮಸೀದಿ ಗಳ ಕುರಿತು ಪೋಸ್ಟ್ ಹಾಕಿದ್ದು, ಈ ಕುರಿತು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಚೋದನಕಾರಿ ಪೋಸ್ಟ್ ಎಂದು ಪ್ರಕರಣ ದಾಖಲಾಗಿತ್ತು. ಸದ್ಯ ಇದೇ ವಸಂತ್ ಗಿಳಿಯಾರ್ ಪೋಸ್ಟ್ ನ್ನು ರೀ ಪೋಸ್ಟ್ ಮಾಡಿದ ಶರತ್ ಶೆಟ್ಟಿ ಮೇಲೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.