Thursday, October 23, 2025

spot_img

ಬೈಂದೂರು, ಕುಂದಾಪುರದ ಗ್ರಾಮೀಣ ಭಾಗದಲ್ಲಿ ಕೆಎಸ್ಸಾರ್ಟಿಸಿ ಬಸ್ ಓಡಿಸಿ: ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ

ಉಡುಪಿ: ಬೈಂದೂರು ಕುಂದಾಪುರದ ಗ್ರಾಮೀಣ ಪ್ರದೇಶಗಳಲ್ಲಿ ಖಾಸಗಿ ಬಸ್ ಇಲ್ಲದ ಮಾರ್ಗಗಳಲ್ಲಿ ಓಡಿಸಬೇಕು ಎಂದು ಹೋರಾಟ ನಡೆದು ಕೆಲವು ಮಾರ್ಗಗಳಿಗೆ ಪರವಾನಿಗೆ ನೀಡಿದರೂ ಖಾಸಗಿ ಬಸ್ ಮಾಲಕರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದೆ ಸಾರಿಗೆ ಪ್ರಾಧಿಕಾರ ಈ ಬಗ್ಗೆ ತೆರವುಗೊಳಿಸಲು ಕ್ರಮವಹಿಸಿಲ್ಲ ಎಂದು ಬೈಂದೂರು ತಾಲೂಕು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ತಾಲೂಕು ಅಧ್ಯಕ್ಷ ರಾಜೀವ ಪಡುಕೋಣೆ ಹೇಳಿದರು.

 ಡಿವೈಎಫ್‌ಐ ಪಡುಕೋಣೆ ಘಟಕ, ಉಡುಪಿ ಜಿಲ್ಲಾ ಹಂಚು ಕಾರ್ಮಿಕರ ಸಂಘ, ಕುಂದಾಪುರ ಮತ್ತು ಬೈಂದೂರು ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಸಂಘ, ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘಗಳ ನೇತೃತ್ವದಲ್ಲಿ ಕುಂದಾಪುರ ಮತ್ತು ಬೈಂದೂರು ತಾಲೂಕಿನಲ್ಲಿ ಬಸ್ ಸೌಕರ್ಯದಿಂದ ವಂಚಿತವಾಗಿರುವ ಗ್ರಾಮ ಮತ್ತು ಪ್ರದೇಶಗಳಿಗೆ ಕೆಎಸ್‌ಆರ್‌ಟಿಸಿ ಬಸ್ ಸೇವೆ ಆರಂಭಿಸಲು ಒತ್ತಾಯಿಸಿ ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಹಮ್ಮಿಕೊಳ್ಳಲಾದ ಅನಿರ್ದಿಷ್ಠಾವಧಿ ಧರಣಿ ಸತ್ಯಾಗ್ರಹವನ್ನುದ್ದೇಶಿಸಿ ಅವರು ಮಾತನಾಡುತಿದ್ದರು.

ನ್ಯೂ ಕಂಪ್ರೆನ್ಸಿವ್ ಏರಿಯಾ ಸ್ಕೀಮ್‌ 07.03.2019ರಂತೆ ರಾಜ್ಯ ರಸ್ತೆ ಸಾರಿಗೆಯವರು ರಾಷ್ಟ್ರೀಕೃತ ಯೋಜನೆ ಪರ್ಮಿಟಿಗಾಗಿ ಅರ್ಜಿ ಸಲ್ಲಿಸಿದಾಗ ಸಂಬಂಧಿತ ಪ್ರಾಧಿಕಾರಿಗಳು ಪರವಾನಿಗೆಯನ್ನು ಕಡ್ಡಾಯವಾಗಿ ವಿತರಿಸಬೇಕು ಎಂದು ನ್ಯೂ ಕಂಪ್ರೇಸಿವ್ ಏರಿಯಾ ಸ್ಕೀಮ್ ನಲ್ಲಿ ದ್ರಡೀಕರಿಸಲಾಗಿದೆ ಆದುದರಿಂದ ಕುಂದಾಪುರ ಬೈಂದೂರು ಗ್ರಾಮೀಣ ಪ್ರದೇಶಗಳಲ್ಲಿ ಕೆಎಸ್ಸಾರ್ಟಿಸಿ ಬಸ್ ಓಡಿಸಲು ಜಿಲ್ಲಾಧಿಕಾರಿಗಳು ಕ್ರಮ ವಹಿಸಬೇಕು ಕಳೆದ ಒಂದು ವರ್ಷದಿಂದ ಅಧಿಕ್ರತವಾಗಿ ಸಾರಿಗೆ ಪ್ರಾಧಿಕಾರ ಸಭೆ ನಡೆಸಿಲ್ಲ ಆದುದರಿಂದ ಸಾರಿಗೆ ಪ್ರಾಧಿಕಾರ ನಮ್ಮ ಸಂಘಟನೆ ಜೊತೆ ಜಂಟಿ ಸಭೆ ನಿಗದಿ ಮಾಡಬೇಕು ಎಂದು ಆಗ್ರಹಿಸಿದರು.

ಧರಣಿಯನ್ನುದ್ದೇಶಿಸಿ ಸಿಐಟಿಯು ರಾಜ್ಯ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಮಾತನಾಡಿ, ಕೆಎಸ್ಸಾರ್ಟಿಸಿ ಬಸ್ ಓಡಿಸಲು ಕಳೆದ ವರ್ಷದಿಂದ ಗ್ರಾಮೀಣ ಭಾಗಗಳಲ್ಲಿ ಸ್ಥಳೀಯವಾಗಿ ಹೋರಾಟಗಳನ್ನು ನಡೆಸಿದರೂ ಪ್ರಾಧೀಕಾರ ಕಡೆಗಣಿಸಿದೆ. ಜನಪ್ರತಿನಿಧಿಗಳು, ಅಧಿಕಾರಿಗಳು,ಖಾಸಗಿ ಬಸ್ ಮಾಲಕರು ಒಂದಾಗಿ ಅಪವಿತ್ರ ಮೈತ್ರಿಯಿಂದ ಸರಕಾರಿ ಬಸ್ ಓಡಿಸದೇ ಮಹಿಳೆಯರಿಗೆ,ವಿದ್ಯಾರ್ಥಿನಿಯರಿಗೆ ಶಕ್ತಿ ಯೋಜನೆಯಿಂದ ವಂಚಿಸಿದ್ದಾರೆ ಎಂದು ಹೇಳಿದರು. ಖಾಸಗೀ ಬಸ್ ಗಳಲ್ಲಿ ವಿದ್ಯಾರ್ಥಿನಿಯರನ್ನು ಕೊನೆಯಲ್ಲಿ ಬಸ್ ಹತ್ತುವಂತೆ, ಸೀಟುಗಳನ್ನು ಕೊಡದೇ ಸತಾಯಿಸಿಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಉಡುಪಿ ಜಿಲ್ಲಾಹಂಚು ಕಾರ್ಮಿಕರ ಸಂಘದ ಜಿಲ್ಲಾಕಾರ್ಯದರ್ಶಿ ಎಚ್ ನರಸಿಂಹ, ಸಿಐಟಿಯು ಜಿಲ್ಲಾಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ವಿ, ಸಿಐಟಿಯು ಜಿಲ್ಲಾಕೋಶಾಧಿಕಾರಿ ಕವಿರಾಜ್ ಎಸ್ ಕಾಂಚನ್,ಕ್ರಷಿ ಕೂಲಿಕಾರರ ಸಂಘದ ನಾಗರತ್ನ ನಾಡ, ಜನವಾದಿ ಮಹಿಳಾ ಸಂಘಟನೆಯ ಶೀಲಾವತಿ, ದಲಿತ ಹಕ್ಕುಗಳ ಸಮಿತಿ ಜಿಲ್ಲಾಸಂಚಾಲಕ ಸಂಜೀವ ಬಳ್ಕೂರು.ನಾಗರತ್ನ ಆð,ನಳಿನಿ, ಉಮೇಶ್ ಕುಂರ್ದ, ನಾಗರತ್ನ ಪಡುವರಿ ಇದ್ದರು..

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles