Monday, March 2, 2026

spot_img

ಬೀದಿ ವ್ಯಾಪಾರಿಗಳ ಸಮಸ್ಯೆ ಬಗೆಹರಿಸಲು ಪೌರಾಡಳಿತ ಸಚಿವರ ನಿರ್ದೇಶನ

ಉಡುಪಿ : ಕುಂದಾಪುರದ ಬೀದಿ ವ್ಯಾಪಾರಿಗಳಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಕಾಂಗ್ರೆಸ್ ನಾಯಕ ಮೊಳಹಳ್ಳಿ ದಿನೇಶ್ ಹೆಗ್ಡೆ ಅವರು ಪೌರಾಡಳಿತ ಸಚಿವ ರಹಿಂ ಖಾನ್ ರವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿದರು.

ಬೀದಿ ವ್ಯಾಪಾರಿಗಳು ತಮ್ಮ ಜೀವನೋಪಾಯ ಕಳೆದುಕೊಳ್ಳದಂತೆ ಅವರಿಗೆ ಸೂಕ್ತ ಬದಲಿ ವ್ಯವಸ್ಥೆ ಕಲ್ಪಿಸುವಂತೆ ದಿನೇಶ್ ಹೆಗ್ಡೆ ಸಚಿವರ ಗಮನಕ್ಕೆ ತಂದರು.

 ಮನವಿಯನ್ನು ಆಲಿಸಿದ ಸಚಿವ ರಹಿಂ ಖಾನ್ ತಕ್ಷಣ ಕುಂದಾಪುರ ಪುರಸಭೆ ಮುಖ್ಯಾಧಿಕಾರಿ ಆನಂದ ಜೆ ಇವರಿಗೆ ದೂರವಾಣಿ ಕರೆಮಾಡಿ, ಬೀದಿ ವ್ಯಾಪಾರಿಗಳ ಸಮಸ್ಯೆಯನ್ನು ತಕ್ಷಣ ಬಗೆಹರಿಸಲು ಹಾಗೂ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಖಡಕ್ ಸೂಚನೆ ನೀಡಿದರು. ಸಚಿವರ ತ್ವರಿತ ಪ್ರತಿಕ್ರಿಯೆ ಸ್ಥಳೀಯ ವ್ಯಾಪಾರಿಗಳಲ್ಲಿ ಸಂತೋಷ ಮೂಡಿಸಿದ್ದು, ಬೇಗನೆ ನ್ಯಾಯಯುತ ಪರಿಹಾರ ದೊರಕುವ ನಿರೀಕ್ಷೆ ವ್ಯಕ್ತವಾಗಿದೆ.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles