ಕತಾರ್ : ಬಿಲ್ಲವಾಸ್ ಕತಾರ್ ನ ವತಿಯಿಂದ ಮಹಿಳಾ ದಿನಾಚರಣೆ ದೋಹಾ ಕತಾರ್ ನಲ್ಲಿ ಸಂಘದ ನೂತನ ಮಹಿಳಾ ಅಧ್ಯಕ್ಷೆ ಶೀಮತಿ ಅಪರ್ಣ ಶರತ್ ಅವರ ನೇತೃತ್ವದಲ್ಲಿ ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು.

ತಮ್ಮ ಜೀವನೋಪಾಯಕ್ಕಾಗಿ ವಿದೇಶಕ್ಕೆ ಬಂದು, ಹಗಲಿರುಳೆನ್ನದೆ ಮನೆಯಲ್ಲಿ ದುಡಿಯುತ್ತಿರುವ 40 ಮಂದಿಯ ಗುಂಪೊoದನ್ನು ಗುರುತಿಸಿ ಅವರ ಬಾಳಿನಲ್ಲೊಂದು ನವ ಚೈತನ್ಯ ತುಂಬಿ, ಉಲ್ಲಾಸದ ಉಪ್ಪರಿಗೆಯನ್ನೇರುವ ಕಾಯಕವನ್ನು ಮಹಿಳಾ ದಿನಾಚರಣೆ ಯಂದು ಬಿಲ್ಲವಾಸ್ ಕತಾರ್ ಮಾಡಿತು. ಅವಕಾಶ ವಂಚಿರಾದ ಈ ಮಹಿಳೆಯರು ವಿವಿಧ ಮೋಜಿನ ಆಟವಾಡುತ್ತಾ, ನೃತ್ಯ, ಚರ್ಚೆ, ಸಂಭಾಷಣೆಯ ಮೂಲಕ ಸಂಜೆಯ ಸವಿಯನ್ನು ಉಂಡರು. ವಿಜೇತರನ್ನು ಬಹುಮಾನಿಸುವುದರೊಂದಿಗೆ ಮಹಿಳಾ ದಿನಾಚರಣೆಯ ಸೊಬಗು ಇನ್ನಷ್ಟು ಹೆಚ್ಚಿತ್ತು. ಬಾಳಲ್ಲೊಂದು ಹೊಸ ಆಶಾ ಕಿರಣ ಮೂಡಿಸಿದ ಬಿಲ್ಲವಾಸ್ ಕತಾರ್ ಗೆ ಮಹಿಳಾ ತಂಡದ ಪರವಾಗಿ ಶೀಮತಿ ರಾಧಿಕಾ ವೈ, ಟಿ. ಡಬ್ಲ್ಯೂ. ಎ. ಸಲಹಾ ಸಮಿತಿಯ ವತಿಯಿಂದ ಶುಭ ಕೋರಿದರು. ಆಗಮಿಸಿದ ಎಲ್ಲಾ ಮಹಿಳೆಯರಿಗೆ ನೆನಪಿನ ಕಾಣಿಕೆ ನೀಡಲಾಯಿತು. ಬಿಲ್ಲವಾಸ್ ಕತಾರ್ ನ ಸಾಂಸ್ಕೃತಿಕ ಕಾರ್ಯದರ್ಶಿ ಶೀಮತಿ ಪೂಜಾ ಜಿತಿನ್ ಕಾರ್ಯಕ್ರಮ ನಿರೂಪಣೆ ಮಾಡಿದರು. ಸಹ ಸಾಂಸ್ಕೃತಿಕ ಕಾರ್ಯದರ್ಶಿ ಶ್ರೀಮತಿ ಶ್ವೇತಾ ವಂದನಾರ್ಪಣೆಗೈದರು. ಸಂಘದ ಮಹಿಳಾ ಸದಸ್ಯರು ಮಹಿಳಾ ದಿನಾಚರಣೆಯನ್ನು ಅಂದಾಗಾಣಿಸಿ ಕೊಟ್ಟರು.