Saturday, June 28, 2025

spot_img

ಬಿಲ್ಲವಾಸ್ ಕತಾರ್ ನ ಅಧ್ಯಕ್ಷ ಸಂದೀಪ್ ಸಾಲಿಯಾನ್ ರವರಿಗೆ ವಿನಯಪೂರ್ವಕ ಬೀಳ್ಕೊಡುಗೆ

ಕತಾರ್ : ಬಿಲ್ಲವಾಸ್ ಕತಾರ್ ನ ನೇತೃತ್ವದಲ್ಲಿ ಎಂ. ಆರ್. ಎ, ಸಲ್ವ ರೋಡ್, ಕತಾರ್, ಔತಣಕೂಟ ಹಾಲ್ ನಲ್ಲಿ ನಡೆದ ಸಮಾರಂಭದಲ್ಲಿ ಬಿಲ್ಲವಾಸ್ ಕತಾರ್ ನ ಅಧ್ಯಕ್ಷ ಸಂದೀಪ್ ಸಾಲಿಯಾನ್ ಅವರನ್ನು ವಿನಯಪೂರ್ವಕವಾಗಿ ಬೀಳ್ಕೊಡಲಾಯಿತು. ಸಂಘದ ಉಪಾಧ್ಯಕ್ಷೆ ಶ್ರೀಮತಿ ಅಪರ್ಣ ಶರತ್ ಅವರು ಸ್ವಾಗತಿಸಿದರು.

ಈ ಸಂದರ್ಭ ಪೂಜಾ ಜಿತಿನ್ ನಿರ್ದೇಶನದಲ್ಲಿ ಮಂಜು ಮತ್ತು ತಂಡದವರಿಂದ, ಸರಳ ಸಜ್ಜನಿಕೆಯ, ನಿರಾಡಂಬರ, ಮೃದು ಸ್ವಭಾವದ ಸಂದೀಪ್ ಸಾಲಿಯಾನ್ ಅವರ ಕತಾರ್ ನ ಜೀವನ ಚರಿತ್ರೆಯನ್ನು ಕಿರು ನಾಟಕ ಪ್ರದರ್ಶನ ನಡೆಯಿತು.  ಐ. ಸಿ. ಸಿ. ಕತಾರ್ ನ ಉಪಾಧ್ಯಕ್ಷ ಸುಬ್ರಮಣ್ಯ ಹೆಬ್ಬಾಗಿಲು, ಬಿಲ್ಲವಾಸ್ ಕತಾರ್ ನ ಮಾಜಿ ಅಧ್ಯಕ್ಷ ರಘುನಾಥ್ ಅಂಚನ್,  ಸಲಹಾ ಮಂಡಳಿ, ಕಾರ್ಯಕಾರಿ ಮಂಡಳಿ  ಮತ್ತು ಸದಸ್ಯ ಸಂದೀಪ್ ಸಾಲಿಯಾನ್ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದರು. ಈ ಸಂದರ್ಭ ವಿಶೇಷವಾಗಿ ಬಿಲ್ಲವಾಸ್ ಕತಾರ್ ನ ಮಾಜಿ ಉಪಾಧ್ಯಕ್ಷ ಅಮಿತ್ ಉಪಸ್ಥಿತರಿದ್ದರು.
ಬೀಳ್ಕೊಡುಗೆ ಸ್ವೀಕರಿಸಿದ ಮಾತನಾಡಿದ ಸಾಲಿಯಾನ್, ಉದ್ಯೋಗದ ನಿಮಿತ್ತ ಹತ್ತಿರದ ಕೊಲ್ಲಿ ರಾಷ್ಟ್ರಕ್ಕೆ  ವರ್ಗಾವಣೆ ಹೊಂದಬೇಕಾದ ಅನಿವಾರ್ಯತೆಯನ್ನು ವ್ಯಕ್ತ ಪಡಿಸಿ ತನಗೆ ಸಹಕರಿಸಿದ ಎಲ್ಲಾ ಮಹನೀಯರನ್ನು ಹೃತ್ಪೂರ್ವಕವಾಗಿ ನೆನಪಿನಂಗಳದಿಂದಿಳಿಸಿ ಅಭಿನಂದಿಸಿದರು. ಬಿಲ್ಲವಾಸ್ ಕತಾರ್ ನ ನೂತನ ಅಧ್ಯಕ್ಷೆ ಅಪರ್ಣ ಶರತ್ ಅವರು ಕಾರ್ಯ ನಿರ್ವಹಿಸಿದರು. ಶ್ವೇತ ವಂದಿಸಿದರು.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles