ಮೂಲ್ಕಿ: ತಡರಾತ್ರಿ ಮೂಲ್ಕಿ ಬಪ್ಪನಾಡು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವ ಸಂದರ್ಭ ಬ್ರಹ್ಮರಥೋತ್ಸವ ವೇಳೆ ದೇವರ ರಥ ಮುರಿದು ಬಿದ್ದಿರುವ ಘಟನೆ ನಡೆದಿದೆ. ಇಂದು ಮುಂಜಾನೆ 1.40 ರಿಂದ 2 ಗಂಟೆ ಸಮಯದಲ್ಲಿ ರಥೋತ್ಸವ ಅದ್ದೂರಿಯಾಗಿ ನಡೆಯುತ್ತಿರುವ ವೇಳೆಯೇ ಬ್ರಹ್ಮರಥೋತ್ಸವ ತೇರಿನ ಮೇಲ್ಭಾಗ ಕುಸಿದು ಬಿದ್ದಿದೆ.

ದೇವಳದ ಅರ್ಚಕರು ರಥದ ಒಳಗಡೆ ಇರುವ ವೇಳೆ ದೇವಳದ ತಿರುವಿನಲ್ಲಿ ರಥ ಸಾಗಿ ಬರುತ್ತಿರುವಾಗ ಈ ಘಟನೆ ನಡೆದಿದೆ. ಅದೃಷ್ಟವಶಾತ್ ಯಾರಿಗೂ ಗಂಭೀರ ಗಾಯಗಳಾಗದೆ ಪಾರಾಗಿದ್ದು, ಘಟನೆಯಿಂದ ದೇವಳದ ಭಕ್ತ ಸಮೂಹ ಭಾರೀ ಆತಂಕಕ್ಕೆ ಕಾರಣವಾಗಿದ್ದು, ಘಟನೆ ಬಳಿಕ ದೇವರ ಉತ್ಸವವನ್ನು ಚಂದ್ರ ಮಂಡಲ ರಥದಲ್ಲಿ ದೇವರ ಉತ್ಸವ ಮುಂದುವರಿಸಲಾಯಿತು…
