ಉಡುಪಿ: ಯುವವಾಹಿನಿ ಉಡುಪಿ ಘಟಕದ ಆಶ್ರಯದಲ್ಲಿ ಮಾ.15 ರಂದು ಸಂಜೆ 4.30 ಕ್ಕೆ “ಬನ್ನಂಜೆ ಬಾಬು ಅಮೀನ್” ಜಾನಪದ ಪ್ರಶಸ್ತಿ ಪ್ರದಾನ ಸಮಾರಂಭವು ಉಡುಪಿ ಚಿಟ್ಪಾಡಿಯ ಲಕ್ಷ್ಮೀ ಸಭಾಭವನದಲ್ಲಿ ನಡೆಯಲಿದೆ. ಈ ಬಗ್ಗೆ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಯುವವಾಹಿನಿ ಉಡುಪಿ ಘಟಕದ ಅಧ್ಯಕ್ಷ ದಯಾನಂದ್ ಕರ್ಕೇರ ಮಾಹಿತಿಯನ್ನು ವಿವರಿಸಿದರು.
ಜಾನಪದ ವಿದ್ವಾಂಸ ಪ್ರಶಸ್ತಿಯನ್ನು ಇತಿಹಾಸ ಪ್ರಧ್ಯಾಪಕ ಡಾ.ತುಕರಾಂ ಪೂಜಾರಿ ಹಾಗು ಜಾನಪದ ಕಲಾವಿದ ಪ್ರಶಸ್ತಿಯನ್ನು ದೈವಾರಾಧನಾ ಸೇವಾ ವರ್ಗದವರಾದ ಅಲೆವೂರು ಗೋಪು ಮಡಿವಾಳರಿಗೆ ನೀಡಲಾಗುವುದು. ಪ್ರಶಸ್ತಿಯು ₹ 12 ಸಾವಿರ ಹಾಗು ಫಲಕವನ್ನು ಒಳಗೊಂಡಿದೆ ಎಂದರು. ತುಳುಕೂಟದ ಅಧ್ಯಕ್ಷ ಇಂದ್ರಾಳಿ ಜಯಕರ್ ಶೆಟ್ಟಿ ಪ್ರಶಸ್ತಿ ಪ್ರದಾನ ಮಾಡುವರು. ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಲೋಕೆಶ್ ಕೋಟ್ಯಾನ್ ಕೂಳೂರು, ಉದ್ಯಮಿ ರಂಜನ್.ಕೆ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ವಿದ್ವಾಂಸ ಬನ್ನಂಜೆ ಬಾಬು ಆಮೀನ್ ಉಪಸ್ಥಿತರಿರಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಾನಪದ ವಿದ್ವಾಂಸ ಬನ್ನಂಜೆ ಬಾಬು ಆಮೀನ್, ರಜತ ಸಂಭ್ರಮ ಸಂಚಾಲಕ ರಘುನಾಥ್ ಮಾಬಿಯಾನ್, ಕಾರ್ಯಕ್ರಮದ ಸಂಚಾಲಕ ಭಾಸ್ಕರ್ ಸುವರ್ಣ, ಸಂತೋಷ್ ಕುಮಾರ್ ಉಪಸ್ಥಿತರಿದ್ದರು.