ಉಡುಪಿ : ಉಡುಪಿ ನಗರಸಭೆಯಿಂದ ಅಧಿಕೃತವಾಗಿ ಸ್ಥಾಪನೆಗೊಂಡಿದ್ದ ಬನ್ನಂಜೆ ನಾರಾಯಣ ಗುರು ವೃತ್ತವನ್ನು ಯಾವುದೇ ಮುನ್ಸೂಚನೆ ಇಲ್ಲದೆ ಬನ್ನಂಜೆ ವೃತ್ತದಿಂದ ಕಿತ್ತು ಬಿಸಾಕಿದ ಘಟನೆ ಬೆಳಿಕಿಗೆ ಬಂದಿತ್ತು. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಮತ್ತು ಬಿಲ್ಲವ ಸಂಘಟನೆಗಳ ಪ್ರತಿಭಟನೆಯ ಎಚ್ಚರಿಕೆ ಹಿನ್ನಲೆಯಲ್ಲಿ ಇಂದು ಸರ್ಕಲ್ ನಲ್ಲಿ ನಾರಾಯಣ ಗುರು ಅವರ ಸ್ಟ್ಯಾಂಡ್ ಮತ್ತೆ ಮರು ಸ್ಥಾಪಿಸಲಾಯಿತು.

ಉಡುಪಿ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದ ಬಳಿಯ ಬನ್ನಂಜೆ ವೃತ್ತವನ್ನು ನಗರಸಭೆ ಈ ಹಿಂದೆ ನಾರಾಯಣ ಗುರು ವೃತ್ತೆ ಎಂದು ಅಧಿಕೃತವಾಗಿ ಸ್ಥಾಪನೆ ಮಾಡಿತ್ತು. ನಾರಾಯಣ ಗುರು ವೃತ್ತವನ್ನು ಉಡುಪಿ ನಗರ ಸಂಚಾರಿ ಠಾಣೆಯ ಪಾಳುಬಿದ್ದ ಜಾಗದ ಪೊದೆಗಳ ಮಧ್ಯೆ ಬಿಸಾಡಿರುವುದು ಪತ್ತೆಯಾಗಿತ್ತು. ಶ್ರೀ ನಾರಾಯಣ ಗುರುಗಳ ಹೆಸರಿನ ವೃತ್ತವಿದ್ದ ಜಾಗದಲ್ಲಿ ಬ್ಯಾಂಕ್ ಆಫ್ ಬರೋಡ ನಾಮಫಲಕದ ವೃತ್ತವನ್ನು ರಚಿಸಲಾಗಿತ್ತು ಈ ವಿಚಾರವಾಗಿ ಬಿಲ್ಲವ ಸಮುದಾಯದ ಆಕ್ರೋಶ ಹೊರಬಿದ್ದಿದೆ, ನಡೆದಿರುವ ಘಟನೆ ಬ್ರಹ್ಮ ಶ್ರೀ ನಾರಾಯಣ ಗುರುಗಳಿಗೆ ತೋರಿದ ದೊಡ್ಡ ಅಗೌರವ, ಇದನ್ನು ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆಯು ತೀವ್ರವಾಗಿ ಖಂಡಿಸುತ್ತದೆ. ಸ್ಥಳೀಯ ಜಿಲ್ಲಾಡಳಿತ ತಕ್ಷಣ ಹೆಚ್ಚೆತ್ತು ಸ್ಪಷ್ಟನೆಯನ್ನು ಕೊಡಬೇಕು ಇಲ್ಲದಿದ್ದಲ್ಲಿ ಇಡೀ ಸಮಾಜವನ್ನು ಒಗ್ಗೂಡಿಸಿಕೊಂಡು ಮುಂದಿನ ನಿರ್ಣಯವನ್ನು ಕೈಗೊಳ್ಳಲಾಗುವುದು ಎಂದು ಜಿಲ್ಲಾ ಬಿಲ್ಲವ ಸಂಘಟನೆ ಎಚ್ಚರಿಕೆ ನೀಡಿದ್ದರು.

ಸಾಕಷ್ಟು ಆಕ್ರೋಶ ಪ್ರತಿಭಟನೆಯ ಎಚ್ಚರಿಕೆ ಹಿನ್ನಲೆಯಲ್ಲಿ ಇಂದು ನಾರಾಯಣ ಗುರು ವೃತ್ತವನ್ನು ಮತ್ತೆ ಮರುಸ್ಥಾಪನೆ ಮಾಡಲಾಯಿತು.