ಉಡುಪಿ : ಆರ್ಎಸ್ಎಸ್ ಸಂಘಟನೆಯ ಚಟುವಟಿಕೆಗಳನ್ನು ನಿಷೇಧಿಸಲು ಪ್ರಿಯಾಂಕ ಖರ್ಗೆ ನೀಡಿದ ಪತ್ರದ ಹಿನ್ನೆಲೆಯಲ್ಲಿ, ಉಡುಪಿಯ ಮಾಜಿ ಶಾಸಕ ರಘುಪತಿ ಭಟ್ ಅವರು ಖಂಡನೆ ವ್ಯಕ್ತಪಡಿಸಿದ್ದಾರೆ. ಆರ್ಎಸ್ಎಸ್ ಸಂಘಟನೆಗೆ ಈಗ ನೂರು ವರ್ಷ ತುಂಬಿದೆ. ದೇಶದಾದ್ಯಂತ ಸಂಘದ ಕಾರ್ಯಚಟುವಟಿಕೆಗಳನ್ನು ಜನರು ಮೆಚ್ಚಿದ್ದಾರೆ. ನೆಹರು ಕಾಲದಲ್ಲೇ ಆರ್ಎಸ್ಎಸ್ ಪರೇಡ್ನಲ್ಲಿ ಪಥಸಂಚಲನ ನಡೆಸಿದೆ ಎಂದರು.

ಈ ಕುರಿತು ಮಾಧ್ಯಮಕ್ಕೆ ಹೇಳಿಕೆ ನೀಡಿದ ಅವರು, ಭಾರತವನ್ನು ಪ್ರೀತಿಸುವವರೆಲ್ಲರೂ ಹಿಂದುಗಳೆಂಬುದು ಆರ್ಎಸ್ಎಸ್ ತತ್ವ, ಹಿಂದೂ, ಕ್ರೈಸ್ತ, ಮುಸ್ಲಿಂ ಎಂಬ ಭೇದಭಾವ ಆರ್ಎಸ್ಎಸ್ಗೆ ಇಲ್ಲ. ಅಟಲ್ ಬಿಹಾರಿ ವಾಜಪೇಯಿ, ನರೇಂದ್ರ ಮೋದಿ ಅವರಂತಹ ನಾಯಕರು ಸಂಘದಿಂದ ಬಂದವರು ಅವರ ಕೆಲಸವನ್ನು ದೇಶವೇ ಮೆಚ್ಚಿದೆ. ಪ್ರಿಯಾಂಕ ಖರ್ಗೆ ಅವರ ನಡೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ ಭಟ್ ಹೇಳಿದರು. ಆರ್ಎಸ್ಎಸ್ ಬೆಳೆದಷ್ಟು ರಾಷ್ಟ್ರಕ್ಕೆ ಒಳಿತು. ಕಾಂಗ್ರೆಸ್ನಲ್ಲಿರುವ ಕೆಲವರು ಸಂಘದ ಯಶಸ್ಸಿಗೆ ಭಯಪಡುತ್ತಿದ್ದಾರೆ. ಆರ್ಎಸ್ಎಸ್ ಯಾವಾಗಲೂ ರಾಷ್ಟ್ರಹಿತದತ್ತ ಕೆಲಸ ಮಾಡಿದೆ; ಧರ್ಮವಿರೋಧಿ ಅಥವಾ ರಾಷ್ಟ್ರವಿರೋಧಿ ಬೋಧನೆ ಎಂದಿಗೂ ಮಾಡಿಲ್ಲ ಎಂದರು.

ಡಿಕೆ ಶಿವಕುಮಾರ್ ಅವರ ‘ಕರಿ ಟೋಪಿ’ ಹೇಳಿಕೆಗೆ ಪ್ರತಿಕ್ರಿಯಿಸಿ ಭಟ್ ಅದು ಕರಿ ಟೋಪಿ ಅಲ್ಲ, ಅದು ಆರ್ಎಸ್ಎಸ್ ಸಂಘದ ಪರಂಪರೆಯ ಗಣವೇಷ. ಅದನ್ನು ಕರಿ ಟೋಪಿ ಎಂದು ಕರೆಯುವ ಸ್ವಭಾವ ಒಳ್ಳೆಯದಲ್ಲ ಎಂದರು.