ಕುಂದಾಪುರ: ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಿಂದ ಕುಂಭ ಮೇಳಕ್ಕೆ ತೆರಳಿದ 153 ಯಾತ್ರಿಗಳಿದ್ದ ರೈಲಿನ ಮೇಲೆ ನಡು ರಾತ್ರಿ ಧಾಳಿ ನಡೆದಿದೆ. ಕುಂಭಮೇಳದಿಂದ ಹಿಂದಿರುಗಿ ಬರುವಾಗ ಯುಪಿಯಿಂದ ಎರಡು ಮೂರು ಸ್ಟೇಶನ್ ಬಳಿಕ ಅಂದರೆ ಸರಿ ಸುಮಾರು ಅಫ್ಜಲ್ ಪುರ ಬಳಿ ಮಧ್ಯರಾತ್ರಿ ಯಾತ್ರಿಗಳಿದ್ದ ರೈಲಿನ ಮೇಲೆ ಏಕಾಏಕಿ ಸಿಕ್ಕ ಸಿಕ್ಕ ವಸ್ತುಗಳಿಂದ ಧಾಲಿನ ನಡೆದಿದೆ. ಘಟನೆಯಿಂದ ಗಾಬರಿಗೊಳಗಾದ ಯಾತ್ರಿಗಳು ತಕ್ಷಣವಾಗಿ ನಡುರಾತ್ರಿ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಕರೆ ಮಾಡಿದ್ದಾರೆ. ಘಟನೆ ಬಗ್ಗೆ ಮಾಹಿತಿ ಪಡೆದ ಸಂಸದರು, ರಾಜ್ಯ ರೈಲ್ವೇ ಸಚಿವರನ್ನು ಸಂಪರ್ಕಿಸಿ ಕಿಡಿಗೇಡಿಗಳ ದುಷ್ಪೃತ್ಯ ಕುರಿತು ಮಾಹಿತಿ ನೀಡಿ ಭದ್ರತೆ ನೀಡುವಂತೆ ಮನವಿ ಮಾಡಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ರೈಲ್ವೆ ಪೊಲೀಸ್ ಅಧಿಕಾರಿ ಹಾಗೂ ಸಿ.ಆರ್.ಪಿ. ತಂಡದವರು ಪರಿಸ್ಥಿತಿಯನ್ನು ಹತೋಟಿಗೆ ತೆಗೆದುಕೊಂಡಿದ್ದಾರೆ.
ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 153 ಕಾರ್ಯಕರ್ತರು ಪ್ರಯಾಗ್‌ರಾಜ್ ಕುಂಭಮೇಳಕ್ಕೆ ತೆರಳಿದ್ದ ಯಾತ್ರಾರ್ಥಿಗಳು ಯಾವುದೇ ಸಮಸ್ಯೆ ಇಲ್ಲದೆ ಭದ್ರತೆಯೊಂದಿಗೆ ನಿನ್ನೆ ರಾತ್ರಿ 10:45 ಸಂದರ್ಭದಲ್ಲಿ ಕುಂದಾಪುರದ ರೈಲ್ವೆ ನಿಲ್ದಾಣ ತಲುಪಿದ್ದಾರೆ. ಊರು ತಲುಪಿದ ಬಳಿಕ, ನಡುರಾತ್ರಿಯಲ್ಲಿ ಕಾರ್ಯಕರ್ತರ ಕರೆಯನ್ನ ಸ್ವೀಕರಿಸಿ, ಭಕ್ತಾದಿಗಳ ಸಂಕಷ್ಟಕ್ಕೆ ಎಚ್ಚೆತ್ತುಕೊಂಡು ಇಡೀ ರಾತ್ರಿ ಮಲಗದೆ ಸಹಕರಿಸಿ ಅತ್ಯಂತ ಸುರಕ್ಷಿತ ಪ್ರಯಾಣಕ್ಕೆ ಅನು ಮಾಡಿಕೊಟ್ಟ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಹಾಗೂ ರಾಜ್ಯ ರೈಲ್ವೆ ಸಚಿವರಾದ ವಿ. ಸೋಮಣ್ಣ ಇವರಿಗೆ ಮತ್ತು ಕರಾವಳಿ ಭಾಗದ ಶಾಸಕರಾದ ಎ. ಕಿರಣ್ ಕುಮಾರ್ ಕೊಡ್ಗಿ, ಗುರ್ಮೆ ಸುರೇಶ್ ಶೆಟ್ಟಿ, ಗುರುರಾಜ್ ಶೆಟ್ಟಿ ಗಂಟೆಹೊಳೆ, ಯಶ್ವಪಾಲ್ ಸುವರ್ಣ, ವಿ ಸುನಿಲ್ ಕುಮಾರ್ ಇವರಿಗೆ ಮತ್ತು ರೈಲ್ವೆ ಹಿತರಕ್ಷಣಾ ಸಮಿತಿ ಕುಂದಾಪುರ ಈ ತಂಡಕ್ಕೂ, ಕುಂಭಮೇಳಕ್ಕೆ ತೆರಳಿದ ತಂಡದ ವತಿಯಿಂದ ಕೃತಜ್ಞತೆ ತಿಳಿಸಿದ್ದಾರೆ.