ಉಡುಪಿ: ಶ್ರೀ ವಿಶ್ವಶತೀರ್ಥ ಸೇವಾ ಸಂಘ, ಹುಬ್ಬಳ್ಳಿ, ಭವಾನಿ ನಗರ ರಾಯರ ಮಠ ಹಾಗೂ ದಕ್ಷಿಣ ಕನ್ನಡ ದ್ರಾವಿಡ ಬ್ರಾಹ್ಮಣ ಸಮಾಜ ಇವರ ಸಂಯುಕ್ತ ಆಶ್ರಯದಲ್ಲಿ ಯತಿಕುಲ ಚಕ್ರವರ್ತಿ ಪದ್ಮವಿಭೂಷಣ ಡಾ. ಶ್ರೀ ವಿಶ್ವಶತೀರ್ಥರ ಆರನೇ ಪಾದುಕಾ ಸಮಾರಾಧನೆ ಅಂಗವಾಗಿ ಪೆರಂಪಳ್ಳಿ ನಿವಾಸಿ ಸುಬ್ರಮಣ್ಯ ಹೆಬ್ಬಾರ್ ಅವರಿಗೆ “ವಿಶ್ವೇಶ ಸೇವಾ ಪ್ರಶಸ್ತಿ” ಪ್ರದಾನ ಮಾಡಲಾಯಿತು.

ಪೇಜಾವರ ಅಧೋಕ್ಷಜ ಮಠದ ಶ್ರೀ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದರು ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು. ಸಮಾಜ ಸೇವೆ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ಸಲ್ಲಿಸಿದ ಕೊಡುಗೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಯಿತು.

ಈ ಸಂದರ್ಭದಲ್ಲಿ ಧಾರ್ಮಿಕ ಗಣ್ಯರು, ಸಂಘಟನೆಯ ಪದಾಧಿಕಾರಿಗಳು ಹಾಗೂ ಭಕ್ತರು ಉಪಸ್ಥಿತರಿದ್ದರು.



