Friday, March 6, 2026

spot_img

ಪಿಗ್ಮಿ ಸಂಗ್ರಾಹಕನ ಹಣ ಕಳವು ಪ್ರಕರಣ: ಅಂತರ್‌ ರಾಜ್ಯ ಕಳ್ಳನ ಸೆರೆ

ಬ್ರಹ್ಮಾವರ : ಪಿಗ್ಮಿ ಸಂಗ್ರಾಹಕನ ಹಣ ಕಳವು ಮಾಡಿ ಪರಾರಿಯಾಗಿದ್ದ ಅಂತರ್‌ ರಾಜ್ಯ ಕಳ್ಳನನ್ನು ಪೊಲೀಸ್‌ ರು ಬಂಧಿಸಿದ್ದಾರೆ.  ಬ್ರಹ್ಮಾವರ ಚಾಂತಾರು ಗ್ರಾಮದ ಶಿವಳ್ಳಿ ಹೋಟೆಲ್‌ ಎದುರು ಕರ್ನಾಟಕ ಬ್ಯಾಂಕ್‌ ಎಟಿಎಮ್‌  ಬಳಿ ಪಿಗ್ಮಿ ಕಲೆಕ್ಷನ್‌ ಮಾಡಿದ  ಹಣವನ್ನು ಬೈಕ್‌ ಸೈಡ್‌ ಬಾಕ್ಸ್‌ನಲ್ಲಿ ಇಟ್ಟು ಬೀಗ ಹಾಕಿ ಪಿಗ್ಮಿ ಸಂಗ್ರಾಹಕ ತೆರಳಿದ್ದರು.

ಇದನ್ನು ಗಮನಿಸಿದ್ದ ಅಂತರ್‌ ರಾಜ್ಯ ಕಳ್ಳ ಸಂತೋಷ್‌ ಹನುಮಂತ ಕಟ್ಟಿಮನಿ ಬೈಕ್‌ ನ ಬಾಕ್ಸ್‌ ನಲ್ಲ ಹಣ ಎಗರಿಸಿ ಪರಾರಿಯಾಗಿದ್ದ. ಪಿಗ್ಮಿ ಸಂಗ್ರಾಹಕ ಮರಳಿ ಬಂದು ಬೈಕ್‌ ಬಾಕ್ಸ್‌ ಪರಿಶೀಲಿಸಿದಾಗ 32000 ರೂಪಾಯಿ ಹಣವನ್ನು ಮತ್ತು ಪಾನ್‌ ಕಾರ್ಡ್‌, ಆಧಾರ್‌ ಕಾರ್ಡ್‌ ಇತರೆ ದಾಖಲೆ ಪತ್ರವನ್ನು ಕಳ್ಳತನ ಮಾಡಿರುವುದು ತಿಳಿದು ಬಂದಿದೆ. ಈ ಕುರಿತು ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾದ ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸ್‌ ರು ಬಿಜಾಪುರ ಇಂಡಿ ತಾಲೂಕಿನ ಸಂತೋಷ್‌ ಹನುಮಂತ ಕಟ್ಟಿಮನಿ (39) ವಶಕ್ಕೆ ಪಡೆದಿದ್ದಾರೆ. ಕಳವು ಮಾಡಿದ ಕಳ ಮತ್ತು ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. 

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles