ಬ್ರಹ್ಮಾವರ: ಪರೀಕ್ಷೆಯಲ್ಲಿ ಫೆಲ್ ಆಗಿದ್ದ ವಿದ್ಯಾರ್ಥಿನಿಯೋರ್ವಳು ಮಾನಸಿಕವಾಗಿ ನೊಂದು ಜೀವನದಲ್ಲಿ ಜಿಗುಪ್ಪೆಗೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬ್ರಹ್ಮಾವರದ ಬಳಿ ನಡೆದಿದೆ. ಬ್ರಹ್ಮಾವರ ಚೇರ್ಕಾಡಿ ಗ್ರಾಮದ ರಾಮ ಅವರ ಪುತ್ರಿ ರಶ್ಮಿತಾ (20) ಆತ್ಮಹತ್ಯೆಗೆ ಶರಣಾದ ಯುವತಿ. ಬಿಎಸ್ಸಿ ನರ್ಸಿಂಗ್ ವಿದ್ಯಾಭ್ಯಾಸ ಕಲಿಯುತ್ತಿದ್ದವಳು ರಶ್ಮಿಕಾ, 6 ತಿಂಗಳ ಹಿಂದೆ ಪರೀಕ್ಷೆಯಲ್ಲಿ ಫೇಲ್ ಆಗಿದ್ದರು. ಹೀಗಾಗಿ ಕಾಲೇಜಿಗೆ ಹೊಗದೇ ಮನೆಯಲ್ಲಿಯೇ ಇದ್ದ ಹಿನ್ನಲೆಯಲ್ಲಿ ಖಿನ್ನತೆಗೆ ಜಾರಿದ್ದಳು. ಕಳೆದ ಎರಡೂವರೆ ತಿಂಗಳಿಂದ ಖಿನ್ನತೆಗೆ ಸಂಬಂಧಿಸಿದ ಚಿಕಿತ್ಸೆ ನಡೆಯುತ್ತಿತ್ತು. ಇದೇ ಕಾರಣದಿಂದ ರಶ್ಮಿತಾ ಮಾನಸಿಕವಾಗಿ ನೊಂದು ಮನೆಯ ಕೋಣೆಯ ಫ್ಯಾನ್ಗೆ ಶಾಲನ್ನು ಕಟ್ಟಿ ಕುತ್ತಿಗೆಗೆ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.


