Friday, February 6, 2026

spot_img

ಪಡುಬಿದ್ರಿ ಮನೆಗೆ ನುಗ್ಗಿ 48 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು..

ಉಡುಪಿ : ಪಡುಬಿದ್ರಿ ಸಮೀಪದ ದೀನ್ ಸ್ಟ್ರೀಟ್‌ನಲ್ಲಿ ಜ.27ರ ರಾತ್ರಿ ಮನೆಯೊಂದಕ್ಕೆ ನುಗ್ಗಿದ ಕಳ್ಳರು ಸುಮಾರು 70 ಪವನ್ ತೂಕದ, 48 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ 50 ಸಾವಿರ ರೂ. ಮೌಲ್ಯದ ರಾಡೋ ವಾಚನ್ನು ಕಳವುಗೈದ ಘಟನೆ ನಡೆದಿದೆ.

ಮುಹಮ್ಮದ್ ಅಪ್ತಾಬ್ ಅಲಿ ಅವರ ತಾಯಿ ಮನೆಗೆ ಬೀಗ ಹಾಕಿ ಹತ್ತಿರದ ಮಗಳ ಮನೆಗೆ ಹೋಗಿದ್ದ ವೇಳೆ ಕಳವು ನಡೆದಿದೆ. ಬಾಗಿಲಿನ ಬೀಗ ಮುರಿದು ಒಳನುಗ್ಗಿದ ಕಳ್ಳರು ಕಪಾಟು ಒಡೆದು ವಿವಿಧ ನೆಕ್ಲೆಸ್‌ಗಳು, ಬಳೆಗಳು, ಉಂಗುರಗಳು, ಬ್ರೇಸ್ಲೇಟ್, ಕಿವಿಯೋಲೆಗಳು ಸೇರಿದಂತೆ ಚಿನ್ನಾಭರಣಗಳನ್ನು ಕದ್ದಿದ್ದಾರೆ. ಮನೆಯಲ್ಲಿ ಅಳವಡಿಸಿದ್ದ ಸಿಸಿಟಿವಿಯನ್ನೂ ಕಳ್ಳರು ಕೊಂಡೊಯ್ದಿದ್ದು, ಅದರ ಸಿಮ್ ಮಾಹಿತಿ ದಾಖಲಾಗಿದೆ ಎಂದು ತಿಳಿದುಬಂದಿದೆ.

ಘಟನಾ ಸ್ಥಳಕ್ಕೆ ಜಿಲ್ಲಾ ಎಸ್ಪಿ ಹರಿರಾಂ ಶಂಕರ್ ಸೇರಿದಂತೆ ಪೊಲೀಸ್ ಅಧಿಕಾರಿಗಳು, ಬೆರಳಚ್ಚು ತಜ್ಞರು ಹಾಗೂ ಶ್ವಾನ ದಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಸತಿ ಪ್ರದೇಶದಲ್ಲೇ ನಡೆದ ಈ ಕಳವು ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles