ಕೋಟ: ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಮಾತೃಸಂಸ್ಥೆ ಪಂಚವರ್ಣ ಯುವಕ ಮಂಡಲದ ಮಾರ್ಗದರ್ಶನದಲ್ಲಿ ಸ್ನೇಹಕೂಟ ಮಣೂರು ಇವರ ಸಹಯೋಗದೊಂದಿಗೆ ವಿಶ್ವಮಹಿಳಾ ದಿನಾಚರಣೆ ಕಾರ್ಯಕ್ರಮ ಇದೇ ಬರುವ ಮಾ.9ರ ಭಾನುವಾರ ಬೆಳಿಗ್ಗೆ 10.ಗ ಮಣೂರು ಮಹಾಲಿಂಗೇಶ್ವರ ಸಭಾಂಗಣದಲ್ಲಿ ಹಮ್ಮಿಕೊಂಡಿದೆ.
ಪಂಚವರ್ಣ ಮಹಿಳಾ ಸಾಧಕ ಪುರಸ್ಕಾರಕ್ಕೆ ಕೋಟದ ಪ್ರೇಮ ಎಸ್ ಶೆಟ್ಟಿ ಆಯ್ಕೆಗೊಂಡಿದ್ದು ಗಣ್ಯರ ಸಮ್ಮುಖದಲ್ಲಿ ಈ ಪುರಸ್ಕಾರ ಪ್ರದಾನ ನಡೆಯಲಿದೆ ಎಂದು ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರ