Saturday, May 10, 2025

spot_img

ಪಂಚವರ್ಣ ಗುರುವಂದನಾ ಕಾರ್ಯಕ್ರಮ

ಕೋಟ: ಸಮಾಜಸೇವೆಯೇ ಜೀವಾಳವಾಗಿರಿಸಿಕೊಂಡು ತನ್ನ ಚೌಕಟ್ಟಿನೊಳಗೆ ನಿರಂತರ ಕಾರ್ಯಕ್ರಮಗಳನ್ನು ನೀಡುವ ಪಂಚವರ್ಣದ ಕಾರ್ಯವೈಕರಿ ನಿಜಕ್ಕೂ ಮೆಚ್ಚುವಂತ್ತದ್ದು ಎಂದು ಹಿರಿಯ
ಪತ್ರಕರ್ತ ಚಂದ್ರಶೇಖರ್ ಬೀಜಾಡಿ ಹೇಳಿದರು. ಮಂಗಳವಾರ ಕೋಟದ ಪಂಚವರ್ಣ ಕಛೇರಿಯಲ್ಲಿ ಸದಸ್ಯ ಗಣೇಶ್ ಕಾಸನಗುಂದು ಇವರ ಹುಟ್ಟುಹಬ್ಬದ ಅಂಗವಾಗಿ ಹಮ್ಮಿಕೊಂಡ ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡಿ ಪ್ರಸ್ತುತ ಯುವ ಸಮೂಹ ದಿಕ್ಕು ತಪ್ಪಿ ಬದುಕುವ ಕಾಲಘಟ್ಟದಲ್ಲಿ ನಾವುಗಳು ಕಾಣುತ್ತೇವೆ ಆದರೆ ಇಲ್ಲಿನ ಈ ಯುವಕ ಪಡೆ ಹೊಸ ಹೊಸ
ಆಲೋಚನೆಗಳ ಮೂಲಕ ಸಮಾಜದ ಒಳಿತಿಗೆ ಶ್ರಮಿಸುತ್ತಿದೆ ಇದು ಅಭಿನಂದನಾರ್ಹ ಕಾರ್ಯವಾಗಿದೆ ಅಂತಯೇ ಪಂಚವರ್ಣದ ಸ್ವಚ್ಛತಾ ಕಾರ್ಯ ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆಯಲಿದೆ.ಇಲ್ಲಿನ ಸಂಘಟಕರ ಕ್ರೀಯಾಶೀಲತೆ ಹೊಸ ಮನ್ವಂತರ ಸೃಷ್ಠಿಸುವಂತಾಗಿದೆ ಎಂದರು.
ಇದೇ ವೇಳೆ ಪಂಚವರ್ಣದ ಸದಸ್ಯ ಗಣೇಶ್ ಹುಟ್ಟುಹಬ್ಬದ ಅಂಗವಾಗಿ ಅವರ ಬಾಲ್ಯದ ಶಿಕ್ಷಕರಾದ ಜೂಲಿಯ ಟೀಚರ್, ಸಹಾಯಕಿ ಜಲಜ ಶೇಖರ್, ಪ್ರಾಥಮಿಕ ಶಾಲಾ ನಿವೃತ್ತ
ಶಿಕ್ಷಕ ಕೊಯ್ಕೂರು ಸೀತಾರಾಮ ಶೆಟ್ಟಿ ಇವರುಗಳನ್ನು ನಿವೃತ್ತ ಶಿಕ್ಷಕ ಎಂ ಎನ್ ಮಧ್ಯಸ್ಥ ಗುರುವಂದನೆಯ ಅಂಗವಾಗಿ ಗೌರವಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಂಚವರ್ಣ
ಯುವಕ ಮಂಡಲದ ಅಧ್ಯಕ್ಷ ಕೆ.ಮನೋಹರ್ ಪೂಜಾರಿ ವಹಿಸಿದ್ದರು. ಮುಖ್ಯ ಅಭ್ಯಾಗತರಾಗಿ ಕೋಟದ ಸಾಮಾಜಿಕ ಕಾರ್ಯಕರ್ತ ಕೆ.ಶ್ರೀಕಾಂತ್ ಶೆಣೈ, ಪಂಚವರ್ಣ ಮಹಿಳಾ ಮಂಡಲದ
ಕಾರ್ಯಾಧ್ಯಕ್ಷೆ ಕಲಾವತಿ ಅಶೋಕ್ ಉಪಸ್ಥಿತರಿದ್ದರು. ಪಂಚವರ್ಣದ ನಿಕಟಪೂರ್ವ ಅಧ್ಯಕ್ಷ ಅಜಿತ್ ಆಚಾರ್ ಸ್ವಾಗತಿಸಿದರು. ಸಲಹಾ ಸಮಿತಿ ಅಧ್ಯಕ್ಷ ರವೀಂದ್ರ ಕೋಟ ಪ್ರಾಸ್ತಾವನೆ
ಸಲ್ಲಿಸಿದರು. ಕಾರ್ಯಕ್ರಮವನ್ನು ಮಹಿಳಾ ಮಂಡಲದ ಸಂಚಾಲಕಿ ಸುಜಾತ ಬಾಯರಿ ನಿರೂಪಿಸಿದರು. ಮಹಿಳಾ ಮಂಡಲದ ಕಾರ್ಯದರ್ಶಿ ವಸಂತಿ ಹಂದಟ್ಟು ವಂದಿಸಿದರು.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles