Wednesday, March 4, 2026

spot_img

ನೂತನ ಸರ್ಕಾರಿ ಆಸ್ಪತ್ರೆ ಕಟ್ಟಡದ ತಾಮ್ರದ ಪೈಪ್‌ ಕಳ್ಳತನದ ಆರೋಪಿಗಳ ಬಂಧನ

ಉಡುಪಿ : ನಿರ್ಮಾಣ ಹಂತದಲ್ಲಿರುವ ಅಜ್ಜರಕಾಡು ನೂತನ ಸರಕಾರಿ ಆಸ್ಪತ್ರೆ ಕಟ್ಟಡದಿಂದ ಕಾಪರ್‌ ಪೈಪ್‌ ಮೊದಲಾದ ಬೆಲೆಬಾಳುವ ವಸ್ತು ಕಳವು ಮಾಡುತ್ತಿದ್ದ ಆರೋಪಿಗಳನ್ನು ಉಡುಪಿ ಪೊಲೀಸ್‌ ರು ಬಂಧಿಸಿದ್ದಾರೆ. ಬೆಂಗಳೂರು ಮೂಲದ ಮಹಮ್ಮದ್‌ ಜಾವೀದ್‌ (29) ಶಿವಮೊಗ್ಗ ಮೂಲದ ಸಯ್ಯದ್‌ ದಾದಾ ಪಿರ್‌ (28) ಬಂಧಿತ ಆರೋಪಿಗಳು.

 ನಿರ್ಮಾಣವಾಗುತ್ತಿರುವ ಹೊಸ ಆಸ್ಪತ್ರೆಗೆ ಆಕ್ಸಿಜನ್‌ ಪೈಪ್‌ ಲೈನ್‌ ಜೋಡಣೆಗಾಗಿ ಸ್ಟೋರೂಮ್‌ ನಲ್ಲಿಟ್ಟಿದ  ಕಾಪರ್‌ ಪೈಪ್‌, ಫಿಟಿಂಗ್ಸ್‌ ಮತ್ತು ಹಳೆ ಕಾಪರ್‌ ಸ್ಟ್ರಿಪ್‌ ಗಳು ಕಳವು ಆಗಿರುವುದನ್ನು ಗಮನಿಸಿ, ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ಲಿಯಾಖತ್‌ ಮತ್ತು ಜಾವೀದ್‌ ಸೇರಿ ಸ್ಟೋರ್‌ ರೂಮಿನಲ್ಲಿಟ್ಟಿದ್ದ ಸುಮಾರು 8 ಲಕ್ಷ ಮೌಲ್ಯದ ಕಾಪರ್‌ ಪೈಪ್‌ , ಫಿಟಿಂಗ್ಸ್‌ ಮತ್ತು ಹಳೆ ಕಾಪರ್‌ ಸ್ಟ್ರಿಪ್‌ ಗಳನ್ನು ಕಳವು ಮಾಡುತ್ತಿರುವುದು ಕಂಡು ಬಂದಿದೆ. ಈ ಕುರಿತು ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದಾಗ, ಪೊಲೀಸ್‌ ರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳು ಕಳವು ಮಾಡಿದ್ದ ಒಟ್ಟು 2,81,000 ರೂಪಾಯಿ ಮೌಲ್ಯದ ತಾಮ್ರದ ಪೈಪ್‌, ಕೃತ್ಯಕ್ಕೆ ಬಳಸಿದ ಮಾರುತಿ ಸ್ವಿಪ್ಟ ಡಿಸೈರ್‌ ಕಾರು, ಕೃತ್ಯಕ್ಕೆ ಬಳಸಿದ ವಸ್ತು ಸೇರಿ 6,31,500. ರೂಪಾಯಿ ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆಯಲಾಗಿದೆ. 

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles