Wednesday, March 4, 2026

spot_img

ನವಂಬರ್ 28ರಂದು ಬೆಳಗ್ಗೆ 7ರಿಂದ ಮಧ್ಯಾಹ್ನ 3ರವರೆಗೆ ಉಡುಪಿ ನಗರ ಪ್ರವೇಶ ನಿರ್ಬಂಧ..!

ಉಡುಪಿ: ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ನವೆಂಬರ್ 28ರಂದು ಉಡುಪಿ ಶ್ರೀಕೃಷ್ಣ ಮಠದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ ಹಿನ್ನೆಲೆಯಲ್ಲಿ, ನಗರದಲ್ಲಿ ವಿಶೇಷ ಸಂಚಾರ ನಿಯಂತ್ರಣ ಜಾರಿಗೊಳಿಸಲಾಗಿದೆ. ಸಾರ್ವಜನಿಕರ ಸುಗಮ ಸಂಚಾರಕ್ಕಾಗಿ ಕೇಂದ್ರ ಮೋಟಾರು ವಾಹನ ಕಾಯ್ದೆ 1988ರ ನಿಯಮ 115 ಹಾಗೂ ಕರ್ನಾಟಕ ಮೋಟಾರು ವಾಹನ ನಿಯಮಾವಳಿ 1989ರ 221(ಎ)(2) ಮತ್ತು (5)ರ ಅನ್ವಯ ಬೆಳಗ್ಗೆ 6ರಿಂದ ಮಧ್ಯಾಹ್ನ 3ರವರೆಗೆ ಸಂಚಾರ ನಿಷೇಧ ಹಾಗೂ ಬದಲಿ ಮಾರ್ಗಾವಳಿ ಜಾರಿಯಾಗಲಿದೆ ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಆದೇಶಿಸಿದ್ದಾರೆ.

ಕುಂದಾಪುರ ಕಡೆಯಿಂದ ಬರುವ ವಾಹನಗಳಿಗೆ, ಸಿಲಾಸ್ ಶಾಲೆಯ ಪಾರ್ಕಿಂಗ್ ನೀಡಲಾಗಿದೆ. ಗುಂಡಿಬೈಲಿನಲ್ಲಿ ಇಳಿಸಿ, ಯೂ-ಟರ್ನ್ ಮಾಡಿ ಎಂಜಿಎಂ ಮೈದಾನಕ್ಕೆ ತೆರಳಿ ಪಾರ್ಕ್ ಮಾಡಬೇಕು. ಕರ್ಕಳ–ಬೆಳ್ವೆ ಮಾರ್ಗದಿಂದ ಬರುವವರು ಕ್ರಿಶ್ಚಿಯನ್ ಹೈಸ್ಕೂಲ್, ಪಿಯು ಕಾಲೇಜ್ ಹಾಗೂ ಬೈಲೂರು ಮುದ್ದಣ ಎಸ್ಟೇಟ್ ಪಾರ್ಕಿಂಗ್. ಮಂಗಳೂರು ಹಾಗೂ ಮಲ್ಪೆ ಕಡೆಯಿಂದ ರೋಡ್‌ ಶೋಗೆ ಬರುವವರಿಗೆ, ಬೈಲೂರು ಮುದ್ದಣ ಎಸ್ಟೇಟ್ ಮತ್ತು ಶಾಮೀಲಿ ಎದುರಿನ ಮೈದಾನದಲ್ಲಿ ಪಾರ್ಕಿಂಗ್. ಹೆಬ್ರಿ–ಕರ್ಕಳ ಮಾರ್ಗದಿಂದ ಬರುವವರಿಗೆ ಶಾರದಾ ಕಲ್ಯಾಣ ಮಂಟಪ ಮಾರ್ಗವಾಗಿ ಬೀಡಿನಗುಡ್ಡೆ ಪಾರ್ಕಿಂಗ್. ಮಲ್ಪೆ ಕಡೆಯಿಂದ ಬರುವ ಸಾರ್ವಜನಿಕರು ವಿವೇಕಾನಂದ ಶಾಲೆಯ ಪಾರ್ಕಿಂಗ್ ಬಳಸಬೇಕು.

 ಬಸ್‌ ಮತ್ತು ಇತರೆ ವಾಹನಗಳ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದ್ದು, ಕೆಎಸ್‌ಆರ್‌ಟಿಸಿ ಮತ್ತು ಪ್ರೈವೇಟ್ ಬಸ್‌ಗಳು ಉಡುಪಿ ಬಸ್‌ಸ್ಟ್ಯಾಂಡ್‌ಗೆ ಪ್ರವೇಶಿಸಲು ಅನುಮತಿ ಇರುವುದಿಲ್ಲ. ಅಂಬಾಗಿಲು – ಮಣಿಪಾಲ – ಅಲೆವೂರು – ಕೊರಂಗ್ರಪಾಡಿ ಮಾರ್ಗವಾಗಿ ಸಂಚರಿಸಬೇಕು. ಮಲ್ಪೆಯಿಂದ ಮಂಗಳೂರು ಕಡೆಗೆ, ಪಡುಕೆರೆಯ ಪಿತ್ರೋಡಿ – ಉದ್ಯಾವರ ಮಾರ್ಗ. ಮಲ್ಪೆಯಿಂದ ಕುಂದಾಪುರ ಕಡೆಗೆ, ಸಂತೆಕಟ್ಟೆ – ನೇಜಾರು ಮಾರ್ಗ.

ಮಂಗಳೂರಿನಿಂದ ಕುಂದಾಪುರ ಕಡೆಗೆ, ಕಟಪಾಡಿ – ಮಣಿಪುರ – ದೇಣೂರಕಟ್ಟೆ – ರಾಂಪುರ – ಅಲೆವೂರು – ಗುಡ್ಡೆ ಅಂಗಡಿ – ಮಣಿಪಾಲ – ಆರ್‌ಎಸ್‌ಬಿ ಸಭಾಭವನ – ಸಿಂಡಿಕೇಟ್ ಸರ್ಕಲ್ – ಕಾಯಿನ್ ಸರ್ಕಲ್ – ಪೆರಂಪಳ್ಳಿ – ಅಂಬಾಗಿಲು – ಎನ್‌ ಎಚ್‌ 66. ಉದ್ಯಾವರ ಮಾರ್ಗದಿಂದ ನಗರಕ್ಕೆ ಬರುವವರಿಗೆ, ಬಲೈಪಾದೆ – ಗುಡ್ಡೆ ಅಂಗಡಿ – ಕೊರಂಗ್ರಪಾಡಿ ಕ್ರಾಸ್ – ಕುಕ್ಕಿಕಟ್ಟೆ – ಜೋಡು ರಸ್ತೆ – ಅಲೆವೂರು – ಮಣಿಪಾಲ – ಅಗದ ಸಭಾಭವನ – ಎನ್‌ ಎಚ್‌ 66. ಕುಂದಾಪುರದಿಂದ ಮಂಗಳೂರು ಕಡೆಗೆ ಅಂಬಾಗಿಲು – ಪೆರಂಪಳ್ಳಿ – ಕಾಯಿನ್ ಸರ್ಕಲ್ – ಸಿಂಡಿಕೇಟ್ ಸರ್ಕಲ್ – ಮಣಿಪಾಲ – ಅಲೆವೂರು – ರಾಂಪುರ – ದೇಣೂರಕಟ್ಟೆ – ಮಣಿಪುರ – ಕಟಪಾಡಿ. ಮಂಗಳೂರಿನಿಂದ ಮಲ್ಪೆ ಕಡೆಗೆ, ಉದ್ಯಾವರ ಜಂಕ್ಷನ್ – ಉದ್ಯಾವರ ಪೇಟೆ – ಪಿತ್ರೋಡಿ – ಸಂಪಿಗೆ ನಗರ – ಕುತ್ಪಾಡಿ – ಕಡೆಕಾರು – ಕಿದಿಯೂರು – ಮಲ್ಪೆ ತೆರಳಲು ಅವಕಾಶ ನೀಡಲಾಗಿದೆ. ಬೆಳಿಗ್ಗೆ 7ರಿಂದ ಮಧ್ಯಾಹ್ನ 3ರವರೆಗೆ ಯಾವುದೇ ವಾಹನಗಳು ಕರಾವಳಿ ಮಾರ್ಗದ ಮೂಲಕ ಉಡುಪಿ ಸಿಟಿ ಬಸ್ ನಿಲ್ದಾಣ ಹಾಗೂ ನಗರ ಕೇಂದ್ರಕ್ಕೆ ಪ್ರವೇಶಿಸಲು ಅವಕಾಶ ಇರುವುದಿಲ್ಲ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles