Monday, March 2, 2026

spot_img

ನಡೂರು ಹೈಸ್ಕೂಲ್ ಸಮೀಪ ಚಿರತೆ ಸಂಚಾರ: ಗ್ರಾಮಸ್ಥರಲ್ಲಿ ಆತಂಕ..

ಉಡುಪಿ : ನಡೂರು ಹೈಸ್ಕೂಲ್ ಹತ್ತಿರದ ಪುಟ್ಟಯ್ಯ ಶೆಟ್ಟಿಯವರ ಮನೆಯ ಆವರಣದಲ್ಲಿ ಚಿರತೆ ಸಂಚರಿಸಿದ ದೃಶ್ಯ ಇತ್ತೀಚೆಗೆ ಕಂಡುಬಂದಿದ್ದು, ಗ್ರಾಮಸ್ಥರಲ್ಲಿ ಭಾರೀ ಆತಂಕ ಉಂಟಾಗಿದೆ.

ಇತ್ತೀಚಿನ ದಿನಗಳಲ್ಲಿ ನಡೂರು ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಚಿರತೆಗಳ ಕಾಣಿಕೆ ಹೆಚ್ಚಾಗುತ್ತಿದ್ದು, ಸಂಜೆ ಹಾಗೂ ರಾತ್ರಿ ವೇಳೆಯಲ್ಲಿ ಸಾರ್ವಜನಿಕರು ಹೊರಗೆ ತಿರುಗಾಡಲು ಕೂಡ ಭಯಪಡುವ ಸ್ಥಿತಿ ನಿರ್ಮಾಣವಾಗಿದೆ. ವಿದ್ಯಾರ್ಥಿಗಳು, ವೃದ್ಧರು ಮತ್ತು ಮಹಿಳೆಯರು ಸಂಚಾರಕ್ಕೆ ಹೆಚ್ಚಿನ ಎಚ್ಚರಿಕೆ ವಹಿಸುವಂತಾಗಿದೆ.

ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಚಿರತೆ ಸಂಚಾರಕ್ಕೆ ತಡೆ ಒದಗಿಸುವಂತೆ ಹಾಗೂ ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಸಾರ್ವಜನಿಕರ ಸುರಕ್ಷತೆಗಾಗಿ ಅರಣ್ಯ ಇಲಾಖೆ ಶೀಘ್ರ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಕೇಳಿಬಂದಿದೆ.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles