Monday, July 28, 2025

spot_img

ಧಾರಾಕಾರ ಗಾಳಿ ಮಳೆಗೆ ಮನೆಗೆ ಹಾನಿ: ಶಾಸಕ ಎ.ಕಿರಣ್ ಕೊಡ್ಗಿ ಭೇಟಿ

ಬ್ರಹ್ಮಾವರ : ಕಳೆದ ರಾತ್ರಿಯಿಂದ ಭಾರಿ ಗಾಳಿ ಮಳೆಗೆ ಹಾನಿಗೀಡಾದ ಯಡ್ತಾಡಿ ಗ್ರಾಮದ ಜಲಜ ಮರಕಾಲ್ತಿಯವರ ಮನೆಗೆ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ ಕಿರಣ್ ಕುಮಾರ್ ಕೊಡ್ಗಿಯವರು ಭೇಟಿ ನೀಡಿ ಕುಟುಂಬದವರಿಗೆ ಧೈರ್ಯ ತುಂಬಿದರು.

ತುರ್ತಾಗಿ ಪ್ರಕೃತಿ ವಿಕೋಪದಡಿ ಪರಿಹಾರ ಕಲ್ಪಿಸುವಂತೆ ಸಂಬಂಧಪಟ್ಟ ಗ್ರಾಮ ಪಂಚಾಯತ್ ಅಧಿಕಾರಿ ಹಾಗೂ ತಹಶೀಲ್ದಾರರಿಗೆ ಆದೇಶಿಸಿದರು.

ಈ ಸಂದರ್ಭದಲ್ಲಿ ಯಡ್ತಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಅಲ್ತಾರು ಗೌತಮ್ ಹೆಗ್ಡೆ, ಉಪಾಧ್ಯಕ್ಷೆ ಶ್ರೀಮತಿ ಸುಶೀಲ, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಿನೋದ ಕಾಮತ್, ಹಾಗೂ ಸ್ಥಳೀಯ ಪ್ರಮುಖರಾದ ಸಚಿನ್ ಶೆಟ್ಟಿ, ಪ್ರದೀಪ್ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles