ಉಡುಪಿ : ರಾಜ್ಯ ಸರಕಾರದ ಜನ ವಿರೋಧಿ ನೀತಿಗಳನ್ನು ಖಂಡಿಸಿ ದಕ ಮತ್ತು ಉಡುಪಿ ಜಿಲ್ಲೆಯ ಗ್ರಾಮ ಪಂಚಾಯತಗಳ ಮುಂದೆ ಜೂನ್ 23 ರಂದು ಬಿಜೆಪಿ ಹಮ್ಮಿಕೊಂಡಿರುವ ಧರಣಿ ಸತ್ಯಾಗ್ರಹ ಹಾಸ್ಯಾಸ್ಪದ ಎ೦ದು ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾನ್ಮಕ್ಕಿ ಹರಿಪ್ರಸಾದ ಶೆಟ್ಟಿ ತಿಳಿಸಿದ್ದಾರೆ. ಬಿಜೆಪಿ ಸರಕಾರದ ಅವಧಿಯಲ್ಲಿ ಸುತ್ತೋಲೆ ಮತ್ತು ಆದೇಶದ ಮೂಲಕ ತಂದಿರುವ ಜನವಿರೋಧಿ ತಿರ್ಮಾನದ ವಿರುದ್ಧ ಈಗ ಬಿಜೆಪಿಯವರೇ ಪ್ರತಿಭಟಿಸುತ್ತಿರುವುದು ಎಷ್ಟು ಸರಿ ಎಂದು ಬಿಜೆಪಿಯವರು ಉತ್ತರಿಸಬೇಕಾಗಿದೆ.
9 / 11 ಸಮಸ್ಯೆಯ ಸುತ್ತೋಲೆ ಜಾರಿಗೊಳಿಸಿರುವುದು ಬಿಜೆಪಿ ಸರಕಾರದ ಅವಧಿಯಲ್ಲಿ . 50, 53 ಮತ್ತು 57 ರ ಅರ್ಜಿಗಳನ್ನು ತಿರಸ್ಕರಿಸುವಂತೆ ಸುತ್ತೋಲೆ ಹೊರಡಿಸಿರುವುದು ಬಿಜೆಪಿ ಸರಕಾರದ ಅವಧಿಯಲ್ಲಿ. ವ್ರದ್ಧಾಪ್ಯ ವೇತನ, ಸಂದ್ಯಾ ಸುರಕ್ಷಾ ಪಿಂಚಣಿ ಯೋಜನೆಗಳನ್ನು ಪರಿಶೀಲಿಸಿ ಸರಕಾರಕ್ಕೆ ಆದ್ಯಾಪಿ೯ ಸುವ ಆದೇಶ ನೀಡಿರುವುದು ಬಿಜೆಪಿ ಸರಕಾರದ ಅವಧಿಯಲ್ಲಿ. ವಿದ್ಯುತ್ ದರ ಹೆಚ್ಚಳ ಮಾಡಿರುವುದು ಸುನೀಲ್ ಕುಮಾರರವರು ಇಂಧನ ಸಚಿವರಾಗಿರುವ ಸಂದರ್ಭದಲ್ಲಿ.
ಪ್ರತಿಭಟನೆಯ 4 ವಿಷಯಗಳಲ್ಲಿ ಶ್ರೀ ಸಾಮಾನ್ಯರಿಗೆ ತೊಂದರೆಯಾಗುತ್ತಿರುವುದು ನಿಜ ವಿಚಾರ. 4 ವಿಷಯಗಳ ಕುರಿತು ಜಿಲ್ಲೆಯ ಜನಪ್ರತಿನಿಧಿಗಳು ಸರಕಾರದ ಮಟ್ಟದಲ್ಲಿ ಮಾತುಕತೆ ನೆಡೆಸಿ ಸಮಸ್ಯೆ ಬಗೆಹರಿಸಬೇಕು. ತಮ್ಮ ಸರಕಾರದ ಅವಧಿಯಲ್ಲಾದ ತಪ್ಪನ್ನು ಮರೆಮಾಚಲು ಪ್ರತಿಭಟನೆ ಮಾಡಲು ಹೊರಟಿರುವುದು ಸರಿಯಾವಕ್ರಮವಲ್ಲ. ಜಿಲ್ಲೆಯ ಜನರಿಗೆ ತೊಂದರೆ ವಿಚಾರದಲ್ಲಿ ರಾಜಕೀಯ ಮಾಡದೇ ಸರಕಾರದ ಮಟ್ಟದಲ್ಲಿ ಪಕ್ಷಾತೀತವಾಗಿ ಸರಿಪಡಿಸಬೇಕಾಗಿದೆ.