Tuesday, February 17, 2026

spot_img

ದೋಹಾ ಬಿಲ್ಲವಾಸ್ ಕತಾರ್‌ನ ಚೊಚ್ಚಲ ತ್ರೋಬಾಲ್ ಟೂರ್ನಮೆಂಟ್ ಯಶಸ್ವಿ

ದೋಹಾ (ಕತಾರ್): ಬಿಲ್ಲವಾಸ್ ಕತಾರ್ ಸಂಸ್ಥೆಯು ತನ್ನ ಚೊಚ್ಚಲ ತ್ರೋಬಾಲ್ ಟೂರ್ನಮೆಂಟ್ ಅನ್ನು ದೋಹಾದ ದಿ ಹ್ಯಾಮಿಲ್ಟನ್ ಇಂಟರ್‌ನ್ಯಾಷನಲ್ ಸ್ಕೂಲ್ ನ ಭವ್ಯ ಒಳಾಂಗಣ ಕ್ರೀಡಾಂಗಣದಲ್ಲಿ ಯಶಸ್ವಿಯಾಗಿ ಆಯೋಜಿಸಿತು. ಕತಾರ್ ರಾಷ್ಟ್ರೀಯ ಕ್ರೀಡಾ ದಿನಾಚರಣೆಯ ಅಂಗವಾಗಿ ನಡೆದ ಈ ಪಂದ್ಯಾಟದಲ್ಲಿ ಪುರುಷರು, ಮಹಿಳೆಯರು ಹಾಗೂ ಮಿಶ್ರ ವಿಭಾಗಗಳಲ್ಲಿ ಒಟ್ಟು 20 ತಂಡಗಳು ಭಾಗವಹಿಸಿದ್ದವು.

ಟೂರ್ನಮೆಂಟ್ ಅನ್ನು ಭಾರತೀಯ ರಾಯಭಾರ ಕಚೇರಿ, ದೋಹಾದ ಪ್ರಥಮ ಕಾರ್ಯದರ್ಶಿ ಹರೀಶ್ ಪಾಂಡೆ ಅವರು ಉದ್ಘಾಟಿಸಿದರು. ಕಾರ್ಯಕ್ರಮದ ಪ್ರಧಾನ ಪ್ರಾಯೋಜಕರಾದ ಎಂ. ಪಲ್ಲೊಂಜಿ ಸಂಸ್ಥೆಯ ನಿರ್ದೇಶಕ ಚಿದಾನಂದ ನಾಯಕ್, ಐಎಸ್‌ಸಿ ಸಲಹಾ ಸದಸ್ಯ ಸುಬ್ರಹ್ಮಣ್ಯ ಹೆಬ್ಬಾಗಿಲು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.


ಬಿಲ್ಲವಾಸ್ ಕತಾರ್ ಅಧ್ಯಕ್ಷೆ ಶ್ರೀಮತಿ ಅಪರ್ಣ ಶರತ್ ಅವರು ಕ್ರೀಡೆಯ ಮೂಲಕ ಸಮುದಾಯದ ಸಾಮರಸ್ಯ, ಸಹಬಾಳ್ವೆ ಮತ್ತು ಒಗ್ಗಟ್ಟನ್ನು ಬಲಪಡಿಸುವುದೇ ಸಂಸ್ಥೆಯ ಉದ್ದೇಶ ಎಂದು ತಿಳಿಸಿದರು. ಉದ್ಘಾಟನಾ ಕಾರ್ಯಕ್ರಮವನ್ನು ಆರ್‌.ಜೆ. ಅಷ್ಟಮಿ ನಿರೂಪಿಸಿದರು. ಪುಟಾಣಿಗಳು ಹಾಗೂ ಪೋಷಕರಿಂದ ನಡೆಸಲಾದ ಗುಂಪು ನೃತ್ಯ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿತು.


ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಫರ್ಹಾನ್ ಅಲ್ ಶೇಖ್ ಅಲ್ ಸಯೀದ್ ಭಾಗವಹಿಸಿ, ಕ್ರೀಡೆಗಳು ಶಿಸ್ತು, ಏಕತೆ ಮತ್ತು ಆರೋಗ್ಯಕರ ಜೀವನಶೈಲಿಗೆ ಪೂರಕವೆಂದು ಅಭಿಪ್ರಾಯಪಟ್ಟರು. ಈ ವೇಳೆ ವಿಶ್ವಕಪ್ ಕಬಡ್ಡಿ 2025 ಚಾಂಪಿಯನ್ ಕುಮಾರಿ ಧನಲಕ್ಷ್ಮೀ ಪೂಜಾರಿ ಅವರಿಗೆ “ಬಿರುವ ಬೊಲ್ಪು” ಬಿರುದು ನೀಡಿ ಗೌರವಿಸಲಾಯಿತು. ಕರ್ನಾಟಕ ಸಂಘ ಕತಾರ್ ದ ಅಧ್ಯಕ್ಷ ಡಾ. ಎಂ. ರವಿಶೆಟ್ಟಿ ಅವರ ನೇತೃತ್ವದಲ್ಲಿ ಸಂಘದ ಪರವಾಗಿಯೂ ಸನ್ಮಾನಿಸಲಾಯಿತು.

ಕ್ರೀಡಾ ಕಾರ್ಯದರ್ಶಿ ಶ್ರೀಮತಿ ಸೀಮಾ ಪೂಜಾರಿ ಅವರು ಧನ್ಯವಾದ ಭಾಷಣದಲ್ಲಿ ಪ್ರಾಯೋಜಕರು, ತಂಡಗಳು, ಸ್ವಯಂಸೇವಕರು ಹಾಗೂ ಸದಸ್ಯರ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸಿದರು.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles