ಕರಾವಳಿಯ ಆರಾಧನೆ ಕಲೆ ಯಕ್ಷಗಾನ, ಇಂತಹ ವಿಶಿಷ್ಟ ಕಲೆಯಲ್ಲಿ ಕೆಲವೊಮ್ಮೆ ಕಲಾವಿದರು ಮಾಡುವ ಅದ್ವಾನಗಳಿಂದ ಪ್ರೇಕ್ಷಕರಿಗೂ, ಭಕ್ತರಿಗೂ ಘಾಸಿಯಾಗುತ್ತದೆ. ಕಲಾವಿದರೋರ್ವರ ಅತಿರೇಕದ ಪ್ರದರ್ಶನದಿಂದ ನೋಡುಗರಿಗೆ ಆಘಾತವಾದ ವಿಡಿಯೋ ಒಂದು ಸದ್ಯ ವೈರಲಾಗುತ್ತಿದೆ. ಯಕ್ಚಗಾನ ಎಂದರೆ ಭಕ್ತಿಯಿಂದ ನೋಡುವ ಕರಾವಳಿಗರಿಗೆ ದೇವಿ ಮಾಹತ್ಮೆ ಪ್ರಸಂಗ ಎಂದರೆ ಅತ್ಯಂತ ಶೃದ್ಧಾ ಭಕ್ತಿಯಿಂದ ಆರೋಜಿಸುತ್ತಾರೆ. ವಾರಗಳ ಕಾಲ ವ್ರತಾಚರಣೆ ಮಾಡಿ, ಯಕ್ಚಗಾನ ಪ್ರದರ್ಶನದಿನ ಮಧ್ಯಾಹ್ನ ಅನ್ನಸಂತರ್ಪಣೆ ಮಾಡುವುದು ವಾಡಿಕೆ. ಇನ್ನು ಯಕ್ಷಗಾನ ಪ್ರದರ್ಶನ ವೇಳೆ ಉಯ್ಯಾಲೆಯಲ್ಲಿ ಶ್ರೀ ದೇವಿ ತೂಗುವುದನ್ನು ಕಂಡು ಭಾವುಕರಾಗುತ್ತಾರೆ. ಇಂತಹ ಅಪರೂಪದ ಸನ್ನಿವೇಶದಲ್ಲಿ ದೇವಿಯ ಪಾತ್ರ ಧರಿಸಿದ ಕಲಾವಿದರೊಬ್ಬರು, ಅತಿ ವೇಗದಿಂದ ದೇವಿಯ ತೊಟ್ಟಿಲು ತೂಗಿದ ಕಾರಣ, ಅದು ತುಂಡಾಗಿ ಭೂಮಿಗೆ ಕುಸಿದು ಬಿದ್ದಿದ್ದಾರೆ. ಆಯೋಜಕರು ಮಾತ್ರವಲ್ಲ ನೋಡಿಗರಿಗೂ ಇದರಿಂದ ಬೇಸರವಾಗಿದೆ. ವರ್ಷಗಳ ಕಾಲ ಬುಕಿಂಗ್ ಮಾಡಿ ಕಾದು ದೇವಿ ಮಹಾತ್ಮೆ ಕಥಾನಕ ಆಡಿಸುವ ಭಕ್ತರಿಗೆ ಇಂತಹ ಅತೀರೇಕದ ವರ್ತನೆ ಬೇಸರ ತಂದಿದೆ. ಇಂತಹ ಅತಿರೇಕಗಳಿಗೆ ಮುಂದೆ ಎಡೆ ಮಾಡಿಕೊಡದೆ ಭಕ್ತರ ಭಕ್ತಿಗೆ ಪೂರಕವಾಗಿ ಕಥಾನಕವನ್ನು ಆಡಿ ತೋರಿಸಬೇಕು ಮತ್ತು ಮುಂದೆ ಈ ತರದ ಅವಘಡಗಳಿಗೆ ಅವಕಾಶವಾಗಬಾರದು ಎಂದು ಯಕ್ಷ ಪ್ರೇಮಿಗಳು ಆಗ್ರಹಿಸಿದ್ದಾರೆ…