ಹೊಸ ರಾಜಕೀಯ ಪಕ್ಷ ಮೂಲಕ ತಮಿಳುನಾಡಿನಾದ್ಯಂತ ಸುದ್ದಿಯಲ್ಲಿರುವ ದಳಪತಿ ವಿಜಯ್ ವೃತ್ತಿ ಜೀವನ ಕಟ್ಟಕಡೆಯ ಚಿತ್ರ ಮುಂದಿನ ವರ್ಷದ ಪೊಂಗಲ್ ಸಂಭ್ರಮಕ್ಕೆ ಸಾಕ್ಷಿಯಾಗಲಿದೆ. ಸರಿ ಸುಮಾರು 500 ಕೋಟಿಗೂ ಅಧಿಕ ಬಜೆಟ್ ನಲ್ಲಿ ಸೆಟ್ಟೇರಿರುವ “ಜನನಾಯಕ್” ಚಿತ್ರ ವಿಜಯ್ ಅಭಿನಯ ಕೊನೆಯ ಚಿತ್ರವೆನಿಸಿಕೊಳ್ಳಲಿದೆ. ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣದಲ್ಲಿ ಸಿನಿಮಾ ಮೂಡಿ ಬರಲಿರುವ ಈ ಸಿನೆಮಾ ಹಲವು ವಿಶೇಷತೆಗಳಿಗೆ ಕಾರಣವಾಗಲಿದೆ. ಸೂರ್ಯ ಮಕರ ರಾಶಿಗೆ ಪ್ರವೇಶಿಸುವ ಪರ್ವ ಕಾಲದ ಪೊಂಗಲ್ ಸಂಭ್ರಮದಂದೆ ಚಿತ್ರ ತೆರೆಯ ಮೇಲೆ ಪ್ರದರ್ಶನ ಕಾಣಲು ಸಿದ್ಧವಾಗಿರುವುದು ದಳಪತಿ ಅಭಿಮಾನಿಗಳ ಇನ್ನಿಲ್ಲದ ಉತ್ಸಾಹಕ್ಕೆ ಕಾರಣವಾಗಿದೆ

ಅಂದ ಹಾಗೆ ಕೆ ವಿಎನ್ ಪ್ರೊಡಕ್ಷನ್ ಅಂದ್ರೆ ಯಾರಿಗೆ ಗೊತ್ತಿಲ್ಲ ಹೇಳಿ ? ಭಾರತೀಯ ಸಿನಿಮಾ ರಂಗ, ಅದರಲ್ಲೂ ದಕ್ಷಿಣ ಸಿನೆಮಾ ಇಂಡಸ್ಟ್ರಿಯಲ್ ಕೆವಿಎನ್ ಪ್ರೊಡಕ್ಷನ್ ಮೈಲಿಗಲ್ಲನ್ನು ಸ್ಥಾಪಿಸಿದ ಸಂಸ್ಥೆ. ರಾಕಿಂಗ್ ಸ್ಟಾರ್ ಯಶ್ ಅಭಿನಯದಲ್ಲಿ ಮೂಡಿ ಬರುತ್ತಿರುವ ಟಾಕ್ಸಿಕ್ ಸಿನಿಮಾ ವನ್ನು ನಿರ್ಮಿಸುತ್ತಿರುವುದು ಇದೆ ಕೆವಿಎನ್ ಸಂಸ್ಥೆ. ಈಗಾಗಲೇ ಭಾರತೀಯ ಚಿತ್ರರಂಗ ಕುತೂಹಲದಿಂದ ಕಾಯುತ್ತಿರುವ ಟಾಕ್ಸಿಕ್ ಸಿನಿಮಾ ವನ್ನು ಅತಿ ಅದ್ದೂರಿಯಿಂದ ನಿರ್ಮಾಣ ಮಾಡುತ್ತಿರುವ ಕೆವಿಎನ್ ಪ್ರೊಡಕ್ಷನ್ ಸಿನಿರಸಿಕರಿಗೆ ರಸದೌತಣ ನೀಡಲು ಬೇಕಾದ ಸಿದ್ಧತೆ ಮಾಡಿಕೊಂಡಿದೆ. ಕೆಜಿಎಫ್ ಚಾಪ್ಟರ್ ಟು ಬಳಿಕ ಇಂಟರ್ನ್ಯಾಷನಲ್ ಸ್ಟಾರ್ ಆಗಿರುವ ರಾಕಿಂಗ್ ಸ್ಟಾರ್ ಯಶ್ ಅವರಿಗೆ ಮತ್ತೊಂದು ಹಂತದ ಹಂತದ ಸ್ಟಾರ್ಟ್ ತಂದು ಕೊಡಲು ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಕೆವಿಎಂ ಸಂಸ್ಥೆ ಟಾಕ್ಸಿಕ್ ಚಿತ್ರದ ಮೂಲಕ ಮಾಡುತ್ತಿದೆ ಎಂದರೆ ತಪ್ಪಾಗಲಾರದು.
ಇದು ಸ್ಯಾಂಡಲ್ ವುಡ್ ಚಿತ್ರರಂಗದ ಕಥೆಯಾದರೆ ಕೆವಿಎನ್ ಪ್ರೊಡಕ್ಷನ್ ಸದ್ಯ ತಮಿಳು ಚಿತ್ರರಂಗಕ್ಕೆ ಕಾಲಿಡುವ ಮೂಲಕ ಸಿನಿ ರಸಿಕರಿಗೆ ಬಿಗ್ ಸರ್ಪ್ರೈಸ್ ನೀಡಿದೆ. ಕೆಬಿಎಂ ಪ್ರೊಡಕ್ಷನ್ ಸಂಸ್ಥೆಯ ಮುಖ್ಯಸ್ಥ ವೆಂಕಟ್ ನಾರಾಯಣ್ ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಸಿನಿಮಾ ಜೊತೆಗೆ ಧ್ರುವ ಸರ್ಜಾ ನಟನೆಯ ಕೆಡಿಸಿನಿಮಾವನ್ನ ಕೂಡ ನಿರ್ಮಾಣ ಮಾಡುತ್ತಿದ್ದಾರೆ. ಇದರ ಜೊತೆಗೆ ಸಿನಿ ರಸಿಕರ ಖುಷಿ ಇಮ್ಮಡಿಯಾಗುವಂತೆ ಸರ್ಪ್ರೈಸ್ ನೀಡಿರುವ ಕೆವಿಎನ್ ಸಂಸ್ಥೆ ಇಳಯ ದಳಪತಿ ವಿಜಯ್ ಅವರ 69ನೆಯ ಚಿತ್ರವನ್ನು ಕೂಡ ನಿರ್ಮಾಣ ಮಾಡುತ್ತಿದೆ. ಸರಿಸುಮಾರು 500 ಕೋಟಿಗೂ ಅಧಿಕ ಬಜೆಟ್ ನಲ್ಲಿ ಚಿತ್ರ ಸೆಟ್ ಏರಿದ್ದು, ಕೆವಿಎನ್ ಕೆ ವೆಂಕಟ್ ನಾರಾಯಣ್ ಅವರ ನಿರ್ಮಾಣದಲ್ಲಿ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಇದರ ಜೊತೆಗೆ ಇನ್ನೊಂದು ಸಂತಸದ ವಿಚಾರ ಎಂದರೆ ಈ ಚಿತ್ರ ತಮಿಳುನಾಡಿನ ಹೆಮ್ಮೆಯ ಹಬ್ಬ ಪೊಂಗಲ್ ದಿನ ತೆರೆಯ ಮೇಲೆ ಪ್ರದರ್ಶನ ಕಾಣಲಿದೆ. ಹೊಸ ರಾಜಕೀಯ ಪಕ್ಷದ ಮೂಲಕ ದೊಡ್ಡ ಮಟ್ಟದ ಸುದ್ದಿಯಲ್ಲಿರುವ ದಳಪತಿ ವಿಜಯ್ ಅಭಿಮಾನಿಗಳು ಸದ್ಯ ಕೆಬಿಎನ್ ನಿರ್ಮಾಣದ ಜನನಾಯಕ ಚಿತ್ರದ ಆಗಮನಕ್ಕಾಗಿ ಕಾಯುತ್ತಿದ್ದಾರೆ.

ಇನ್ನು ತಮಿಳುನಾಡಿನಲ್ಲಿ ವಿಜಯ್ ಗೆ ಇರುವ ಫ್ಯಾನ್ ಫಾಲೋಯಿಂಗ್ ಗಮನಿಸಿ ಕೆವಿಎನ್ ಪ್ರೊಡಕ್ಷನ್ ಚಿತ್ರ ನಿರ್ಮಾಣದಲ್ಲಿ ಯಾವುದೇ ಕೊರತೆ ಆಗದಂತೆ ನೋಡಿಕೊಳ್ಳುತ್ತಿದೆ. ಮಾಡಿದ ಸಿನಿಮಾಗಳಲ್ಲಿ ಸಣ್ಣ ತಪ್ಪು ಆಗದಂತೆ ಅತ್ಯಂತ ನಯ ನಾಜೂಕಿನಿಂದ ಚಿತ್ರವನ್ನು ನಿರ್ಮಿಸುವುದು ಹಿರಿಮೆ ಎಂದರೆ ತಪ್ಪಾಗಲಾರದು. ಜನನಾಯಕ ಚಿತ್ರ ವಿಜಯ್ ಸಿನಿ ಬದುಕಿನ ಕೊನೆಯ ಚಿತ್ರ ಎನ್ನಲಾಗಿದ್ದು ಈ ಹಿನ್ನೆಲೆಯಲ್ಲಿ ದಕ್ಷಿಣ ಭಾರತದ ಅತಿ ದೊಡ್ಡ ಸಿನಿಮಾ ನಟನ ಶನಿ ಜೀವನದ ವಿದಾಯಕ್ಕೆ ಯೋಗ್ಯವಾದ ವೇದಿಕೆ ನಿರ್ಮಿಸಬೇಕು ಎನ್ನುವ ಪಣತೊಟ್ಟು ಕಾರ್ಯೋನ್ಮುಖವಾಗಿದೆ.
ಎನ್ ವಿನೋತ್ ನಿರ್ದೇಶಿಸಿ ಅನಿರುದ್ದ್ ರವಿಚಂದರ್ ಮ್ಯೂಸಿಕ್ ಮಾಡಿರುವ ಸಿನಿಮಾ ಕೋಟ್ಯಾನುಕೋಟಿ ದಳಪತಿ ವಿಜಯ್ ಅಭಿಮಾನಿಗಳ ಹೃದಯ ಗೆಲ್ಲೋದ್ರಲ್ಲಿ ನೋ ಡೌಟ್… ಒಂದು ಕಡೆ ಹಬ್ಬದ ಸಂಭ್ರಮ ಅವತ್ತು ಮನೆ ಮಾಡಿರುತ್ತೆ…ಮತ್ತೊಂದು ಕಡೆ ದಳಪತಿ ವಿಜಯ್ ಅದ್ದೂರಿ ಬೀಳ್ಕೊಡುಗೆ ಈ ಸಿನಿಮಾ ಮೂಲಕ ಸಿಗಲಿದೆ…ಜನನಾಯಕನ್ ನೋಡೋದಿಕ್ಕೆ ಜನ ಕೂಡ ಕಾತುರದಿಂದ ಕಾಯುತ್ತಿದ್ದಾರೆ…
ಸಖತ್ ಸಿನಿಮಾ ಮೂಲಕ ಸಿನಿ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟ ಕೆವಿಎನ್ ಪ್ರೊಡಕ್ಷನ್ಸ್ ಡಿಸ್ಟ್ರಿಬ್ಯುಷನ್ ಕಾರ್ಯದಲ್ಲೂ ಒಳ್ಳೆ ಹೆಸರು ಮಾಡಿದೆ… ಪೊಗರು, ಆರ್ ಆರ್ ಆರ್, ಸೀತಾರಾಮಂ, 777 ಚಾರ್ಲಿ, ಕೃಷ್ಣಂ ಪ್ರಣಯ ಸಖಿ, ಮಾರ್ಟಿನ್…ಹೀಗೆ ಅನೇಕ ಸಿನಿಮಾಗಳ ಹಂಚಿಕೆ ಕೆಲಸ ಮಾಡಿ ಹೆಸರು ಮಾಡಿದೆ.. ಇನ್ನು ನಿರ್ಮಾಣದ ವಿಚಾರಕ್ಕೆ ಬಂದ್ರೆ, ಸಖತ್, ಬೈಟ್ ಲವ್, ಕೆಡಿ ದಿ ಡೆವಿಲ್, ಇದೀಗ ತಮಿಳು ಚಿತ್ರರಂಗಕ್ಕೆ ದಳಪತಿ ವಿಜಯ್ ಸಿನಿಮಾ ನಿರ್ಮಾಣದ ಮೂಲಕ ಎಂಟ್ರಿ ಕೊಟ್ಟಿದೆ…ಆಲ್ ದಿ ಬೆಸ್ಟ್ ಕೆವಿಎನ್ ಪ್ರೊಡಕ್ಷನ್ಸ್