Thursday, March 5, 2026

spot_img

ತ್ರಿವರ್ಣ ಆರ್ಟ್ ಕ್ಲಾಸ್ಸಸ್ ವಿದ್ಯಾರ್ಥಿಗಳಿಂದ ಮರಳು ಶಿಲ್ಪದ ಮೂಲಕ ಕ್ರಿಸ್‌ಮಸ್ ಶುಭಾಶಯ

ಉಡುಪಿ : ಜಗತ್ತಿನಾದ್ಯಂತ ಕ್ರಿಸ್‌ಮಸ್ ಹಬ್ಬದ ಸಂಭ್ರಮ ಮನೆಮಾಡಿರುವ ಹಿನ್ನೆಲೆಯಲ್ಲಿ, ಮಣಿಪಾಲದ ತ್ರಿವರ್ಣ ಆರ್ಟ್ ಕ್ಲಾಸ್ಸಸ್‌ನ ಕಲಾ ವಿದ್ಯಾರ್ಥಿಗಳು ವಿಶಿಷ್ಟ ರೀತಿಯಲ್ಲಿ ಕ್ರಿಸ್‌ಮಸ್ ಶುಭಾಶಯ ಸಾರಿದರು. ತ್ರಿವರ್ಣ ಆರ್ಟ್ ಕ್ಲಾಸ್ಸಸ್‌ನ 10ರಿಂದ 18 ವರ್ಷದೊಳಗಿನ ಆಯ್ದ ವಿದ್ಯಾರ್ಥಿಗಳು ಕಲಾವಿದ ಹರೀಶ್ ಸಾಗಾ ಅವರ ಮಾರ್ಗದರ್ಶನದಲ್ಲಿ ಮಲ್ಪೆ ಕಡಲ ತೀರದಲ್ಲಿ ಸಾಂತಾ ಕ್ಲಾಸ್ ಉಡುಗೊರೆಯೊಂದಿಗೆ ಸಿಹಿ ಹಂಚುವ ಸಂದೇಶ ಸಾರುವ ಸುಂದರ ಮರಳು ಶಿಲ್ಪವನ್ನು ರಚಿಸಿದರು.

  ಕ್ರಿಸ್‌ಮಸ್ ಶುಭಾಶಯ ಎಂಬ ಸಂದೇಶವನ್ನು ಒಳಗೊಂಡ ಈ ಕಲಾಕೃತಿ ಸಾರ್ವಜನಿಕರ ಗಮನ ಸೆಳೆಯಿತು. ಈ ಕಾರ್ಯಕ್ರಮದಲ್ಲಿ ಅಶುತೋಷ್ ಎಂ. ನಾಯಕ್, ವೈಷ್ಣವಿ ಅರುಣ್, ಓಂ ಪ್ರದೀಪ್ ವಿಹಾನ್ ಶೇರಿಗಾರ್, ಸ್ಪರ್ಶ್ ಎಸ್. ಪೂಜಾರಿ, ಮೆಹಕ್ ಎಂ., ಶೇಯಾ ಎಂ. ದೇವಾಡಿಗ, ಸಾಧನಾ ಎನ್.ವಿ., ವೈನವಿ ಆರ್. ಪದ್ಮಶಾಲಿ, ಸ್ಮೃತಿ ತುಂಗಾ ಪಿ., ಭವಿಷ್ ಶೇರಿಗಾರ್ ಹಾಗೂ ರಿದ್ದೀಶ್ ನಾಯಕ್ ವಿದ್ಯಾರ್ಥಿಗಳು ಪಾಲ್ಗೊಂಡು ಸಂಭ್ರಮಿಸಿದರು.

ಕಾರ್ಯಕ್ರಮಕ್ಕೆ ಶ್ರೀಮತಿ ಕವಿತಾ ಎಂ. ನಾಯಕ್, ವಿದ್ಯಾರಾಣಿ ಹಾಗೂ ‘ಸ್ಯಾಂಡ್ ಥೀಮ್’ ಉಡುಪಿ ತಂಡದ ಕಲಾವಿದರಾದ ಸಂತೋಷ್ ಭಟ್ ಹಾಲಾಡಿ ಮತ್ತು ಉಜಿಲ್ ನಿಟ್ಟೆ ಸಹಕಾರ ನೀಡಿದರು. ಮರಳು ಶಿಲ್ಪದ ಮೂಲಕ ಕ್ರಿಸ್‌ಮಸ್‌ನ ಪ್ರೀತಿ, ಸಂತೋಷ ಮತ್ತು ಹಂಚಿಕೆಯ ಸಂದೇಶವನ್ನು ಸಾರಿದ ಈ ಪ್ರಯತ್ನ ಸ್ಥಳೀಯರಿಂದ ಮೆಚ್ಚುಗೆ ಪಡೆದಿತು.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles