ಉಡುಪಿ : ಉಡುಪಿ ಜಿಲ್ಲಾ ಆಸ್ಪತ್ರೆ ಹಾಗೂ ಕೆ.ಎಂ.ಸಿ ಮಣಿಪಾಲ್ ಸಮುದಾಯ ವೈದ್ಯಕೀಯ ವಿಭಾಗದ ಸಹಯೋಗದೊಂದಿಗೆ ತುರ್ತು ಪರಿಸ್ಥಿತಿಗಳನ್ನು ನಿಭಾಯಿಸಲು ಆಸ್ಪತ್ರೆಯ ಶೂಶ್ರಷಕ ಅಧಿಕಾರಿಗಳಿಗೆ ಹಾಗೂ ಭದ್ರತಾ ಸಿಬ್ಬಂದಿ ಮತ್ತು ಆಸ್ಪತ್ರೆಯ ಇತರೆ ಸಿಬ್ಬಂದಿಗಳಿಗೆ ಜ್ಞಾನ ಮತ್ತು ಕೌಶಲ್ಯಗಳನ್ನು ಸುದಾರಿಸುವ ಗುರಿಯನ್ನು ಹೋದಿರುವ ಕಾರ್ಡಿಯಾಕ್ ಪಲ್ಮನರಿ ರಿಸಪಿಟೇಶನ್ ತರಭೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಸರ್ಜನ್ ಡಾ. ಹೆಚ್ ಅಶೋಕ್ ಸಿ.ಪಿ.ಆರ್ ಒಂದು ನಿರ್ಣಯಕ ಜೀವ ಉಳಿಸುವ ತಂತ್ರವಾಗಿದ್ದು ತುರ್ತಸಂದರ್ಭಗಳಲ್ಲಿ ಇದು ಅತ್ಯಗತ್ಯವಾಗಿದೆ. ಈ ಕಾರ್ಯಕ್ರಮದ ಉದ್ದೇಶವು ತುರ್ತು ಸಂದರ್ಭಗಳಲ್ಲಿ ಈ ಸಿ.ಪಿ.ಆರ್ ಪ್ರಯೋಗದ ಬಗ್ಗೆ ನಮ್ಮ ಆಸ್ಪತ್ರೆಯ ಎಲ್ಲಾ ಸಿಬ್ಬಂದಿಗಳಿಗೆ ಅರಿವು ಇರಬೇಕು ಎಂಬುದರ ಸಲುವಾಗಿ ಈ ಕಾರ್ಯಕ್ರಮ ಆಯೋಜಿಸಿದ್ದು ಮತ್ತು ಇದರಿಂದ ಬಹಳಷ್ಟು ಜನರ ಅಮೂಲ್ಯ ಜೀವಗಳನ್ನು ಉಳಿಸಲು ಸಾದ್ಯವಾಗುತ್ತೆ ಎಂದರು.

ಡಾ. ದಿವ್ಯ ಡಾ.ಹೊಳ್ಳ ಇವರ ತಂಡವು ರೋಗಿಯೊಬ್ಬರು ಹೃದಯ ಸ್ತಂಭನಕ್ಕೂಳಗಿದಾಗ ಸಿ.ಪಿ.ಆರ್.ನ ಮಹತ್ವದ ಬಗ್ಗೆ ಕುರಿತು ಉಪಾನ್ಯಾಸ ಹಾಗೂ ಪ್ರಾಯೋಗಿಕವಾಗಿ ಹೇಗೆ ಸಿಪಿಆರ್ ನ ಮಾಡಬೇಕು ಎಂದು ತಿಳಿಸಿಕೊಟ್ಟರು. ಮೊದಲಿಗೆ ಜಿಲ್ಲಾ ಆಸ್ಪತ್ರೆಯ ಆರ್.ಎಂ.ಓ ಡಾ. ವಾಸುದೇವ್, ಡಾ. ರತ್ನ ಡಾ. ಮೇರಿ ಉಪಸ್ಥಿತರಿದ್ದರು
