Wednesday, October 22, 2025

spot_img

ತಿತ್ತಿತೈ–ಯಕ್ಷ ಪರ್ವ 2025: ಬೆಂಗಳೂರಿನಲ್ಲಿ ಭವ್ಯ ಯಕ್ಷಗಾನ ಸಂಭ್ರಮ

ಉಡುಪಿ : ಬೆಂಗಳೂರಿನ ಯಕ್ಷರಸಿಕರಿಗಾಗಿ ಯಕ್ಷಗಾನದ ಮೇರು ಕಲಾವಿದರನ್ನು ಒಂದೇ ವೇದಿಕೆಯಲ್ಲಿ ತರುವ ಪ್ರಯತ್ನವಾಗಿ, ರವೀಂದ್ರ ಕಲಾಕ್ಷೇತ್ರದಲ್ಲಿ ಇದೇ ಶನಿವಾರ ರಾತ್ರಿ 9:10ರಿಂದ ಆರಂಭಗೊಳ್ಳುವ “ತಿತ್ತಿತೈ–ಯಕ್ಷ ಪರ್ವ 2025” ಪ್ರೇಕ್ಷಕರಿಗೆ ಅಪರೂಪದ ಯಕ್ಷಗಾನ ಸಂಭ್ರಮವನ್ನು ನೀಡಲು ಸಜ್ಜಾಗಿದೆ. ಈ ವಿಶೇಷ ಯಕ್ಷಪರ್ವದಲ್ಲಿ ಮೂರು ಪ್ರಸಂಗಗಳನ್ನು ಭಿನ್ನತೆಯೊಂದಿಗೆ ಆಯೋಜಿಸಲಾಗಿದೆ.

ಮೊದಲ ಪ್ರಸಂಗ “ದಮಯಂತಿ ಪುನಃ ಸ್ವಯಂವರ”. ಕೆರೆಮನೆ ಪರಂಪರೆಯ ಋತುಪರ್ಣ–ಬಾಹುಕ ಜೋಡಿ ಪ್ರಸಿದ್ಧವಾಗಿದ್ದ ಈ ಪ್ರಸಂಗದಲ್ಲಿ, ವರ್ತಮಾನದಲ್ಲಿ ಕೊಂಡದಕುಳಿ ರಾಮಚಂದ್ರ ಹೆಗಡೆ (ಬಾಹುಕ) ಮತ್ತು ಬಳ್ಕೂರು ಕೃಷ್ಣ ಯಾಜಿ (ಋತುಪರ್ಣ) ಪ್ರಮುಖ ಪಾತ್ರಗಳಲ್ಲಿ ರಂಗವೇರುತ್ತಾರೆ.

ದಮಯಂತಿಯಾಗಿ ನೀಲ್ಕೋಡ್ ಶಂಕರ ಹೆಗಡೆ, ಸುದೇವ ಬ್ರಾಹ್ಮಣನಾಗಿ ಸಿದ್ಧಾಪುರ ಅಶೋಕ್ ಭಟ್, ಚೇದಿರಾಣಿಯಾಗಿ ಪಂಜು ಬಗ್ವಾಡಿ ಕಾಣಿಸಿಕೊಳ್ಳಲಿದ್ದಾರೆ. ಭಾಗವತಿಗಳಾಗಿ ಕೊಳಗಿ ಕೇಶವ ಹೆಗಡೆ ಮತ್ತು ಮೂಡುಬೆಳ್ಳೆ, ವಾದ್ಯದಲ್ಲಿ ಫಾಟಕ್–ಕುಂಜತ್ತಾಯರು ಜೋಡಿಯಾಗಲಿದ್ದಾರೆ.

ಎರಡನೇ ಪ್ರಸಂಗ “ಭೃಗು ಶಾಪ”. ಶ್ರೀಧರ್ ಡಿ.ಎಸ್. ರಚನೆಯ ಈ ಬಿರುಸಿನ ಪ್ರಸಂಗದಲ್ಲಿ ಪೆರ್ಮುದೆ, ಜಲವಳ್ಳಿ, ಸೀತಾರಾಮ ಕುಮಾರ್ ಮುಂತಾದವರು ಪಾತ್ರವಹಿಸಿದ್ದಾರೆ. ಹಾಸ್ಯ, ವೀರ ರಸ ಹಾಗೂ ವಾಗ್ವಾದಗಳನ್ನು ಒಟ್ಟುಗೂಡಿಸಿರುವ ಈ ಆಖ್ಯಾನ ಪ್ರೇಕ್ಷಕರಿಗೆ ರಂಗಸ್ಥಳದ ಬಿಸಿತನವನ್ನು ನೀಡಲಿದೆ. ಕೊನೆಯ ಪ್ರಸಂಗ “ಕೃಷ್ಣ ಸಂಕಲ್ಪ”. ತೀರ್ಥಹಳ್ಳಿ ಗೋಪಾಲ್ ಆಚಾರ್ ಮತ್ತು ಕೊಳಲಿ ಕೃಷ್ಣ ಶೆಟ್ಟಿ ಅವರ ಹಿರಿಯ ಜೋಡಿ ರಂಗೇರಲಿದ್ದು, ಭಾಮಿನಿ ವೇಷ, ಪದ್ಯ–ಚಂಡೆಯ ಜುಗಲ್ಬಂದಿ ವಿಶೇಷ ಆಕರ್ಷಣೆಯಾಗಲಿದೆ. ಯಕ್ಷರಸಿಕರಿಗೆ ಇದು ನೈಜ ಯಕ್ಷಗಾನ ಸವಿನೆನಪನ್ನು ನೀಡುವ ಪರ್ವವಾಗಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles