ಉಡುಪಿ: ತಂಡದ ವತಿಯಿಂದ “ಕರ್ಣ ಮಹಾಸಂಗಮ” ಕಾರ್ಯಕ್ರಮವು ಉದ್ಯಾವರದ ಸಭಾಭವನದಲ್ಲಿ ಸಂಭ್ರಮದಿಂದ ನಡೆಯಿತು. ತಂಡದ ಸದಸ್ಯರು ತಮ್ಮ ಉದ್ದೇಶಗಳನ್ನು ಹಂಚಿಕೊಂಡು, ಮುಂದಿನ ದಿನಗಳಲ್ಲಿ ಕೈಗೊಳ್ಳಲಿರುವ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು.

ಸಮಾಜಸೇವಕ ನಿತ್ಯಾನಂದ ಒಳಕಾಡು, ಚಾಯ್ ಪಾಯಿಂಟ್ ಮಾಲೀಕ ಧನುಷ್, ತುಳುನಾಡು ಸಂರಕ್ಷಣಾ ವೇದಿಕೆ ಅಧ್ಯಕ್ಷ ಭಾರತ್ ಬಲ್ಲಾಳ್ಬಾಗ್, ಕರ್ಣ ತಂಡದ ಅಧ್ಯಕ್ಷ ಬಾಲಚಂದ್ರ, ಉಪಾಧ್ಯಕ್ಷ ತೇಜಸ್ ಪೂಜಾರಿ, ಉಪಾಧ್ಯಕ್ಷ ದೀಪಕ್ ಅಂಬಾಗಿಲು, ಕಮಲಾಕ್ಷಿ ಮೇಡಂ ಮತ್ತು ಟೀಮ್ ಕರ್ಣ ತಂಡದ ಸದಸ್ಯರು ಉಪಸ್ಥಿತರಿದ್ದರು. ಕೃತಿ ಮೂಡುಬೆಟ್ಟು ನಿರೂಪಿಸಿದರು. ದೀಪಕ್ ವಂದಿಸಿದರು.
