Thursday, March 5, 2026

spot_img

ಜೆಸಿಟಿಯು ನೇತ್ರತ್ವದಲ್ಲಿ ಪ್ರತಿಭಟನೆ

ಉಡುಪಿ: ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (ಜೆಸಿಟಿಯು)ಇಂದು ಕಾರ್ಮಿಕ ಕಾನೂನು ತಿದ್ದುಪಡಿ ವಿರೋಧಿಸಿ, ಕೇಂದ್ರ ಸರಕಾರದ  ಕಾರ್ಮಿಕ ವಿರೋಧಿ ನೀತಿಗಳನ್ನು ಖಂಡಿದಿ ದೇಶಾದ್ಯಂತ ಹರಾತಳ, ಜೈಲು ಭರೋ, ಮುಷ್ಕರ ಕ್ಕೆ ಕರೆ ನೀಡಿದ್ದು ಉಡುಪಿ ಜಿಲ್ಲೆಯ ಕುಂದಾಪುರ, ಬೈಂದೂರು, ಉಡುಪಿ ಕೇಂದ್ರಗಳಲ್ಲಿ ಪ್ರತಿಭಟನೆ, ರಸ್ತೆ ತಡೆ ನಡೆಯಿತು. ಉಡುಪಿಯಲ್ಲಿ ಜೆಸಿಟಿಯು ನೇತ್ರತ್ವದಲ್ಲಿ ಬಸ್ ನಿಲ್ದಾಣದಿಂದ ಮೆರವಣಿಗೆ ಹೊರಟು ಉಡುಪಿ ಪ್ರಧಾನ ಅಂಚೆ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಅಂಚೆ ಅಧಿಕ್ಷಕರ ಮೂಲಕ  ದೇಶದ ಪ್ರಧಾನ ಮಂತ್ರಿಯವರಿಗೆ ಕಾರ್ಮಿಕರ ಬೇಡಿಕೆಗಳ ಮನವಿಯನ್ನು ನೀಡಲಾಯಿತು.

ಸಭೆಯನ್ನು ಉದ್ದೇಶಿಸಿ ಪ್ರಧಾನ ವಾಗಿ ಸಿಐಟಿಯು ರಾಜ್ಯ ಉಪಾಧ್ಯಕ್ಷ ರಾದ ಬಾಲಕೃಷ್ಣ ಶೆಟ್ಟಿ ಯವರು ಕಾರ್ಮಿಕ ಕಾನೂನು ತಿದ್ದುಪಡಿಯಿಂದಾಹಿ ಕಾರ್ಮಿಕರಿಗೆ ಆಗುವ ಸಮಸ್ಯೆಗಳ ,ಅನ್ಯಾಯದ ವಿರುದ್ಧ ಮಾತಾನಾಡಿದರು. ಪ್ರತಿಭಟನೆ ಸಭೆಯಲ್ಲಿ ಜೆಸಿಟಿಯು ನ ಭಾಗವಾಗಿ ಇರುವಂತಹ ಎಐಟಿಯುಸಿ ಸಂಘದ ಉಡುಪಿ ಜಿಲ್ಲಾ ಮುಖಂಡರಾದ ಯು.ಶಿವನಂದ,ಶಶಿಕಲಾ,ಐಎನ್‌ ಟಿಯುಸಿ ಸಂಘಟನೆಯ ಉಡುಪಿ ಜಿಲ್ಲಾ ಮುಖಂಡರಾದ ಕಿರಣ್ ಹೆಗ್ಡೆ, ಶಿವರಾಮ್, ಪ್ರದೀಪ್, ಆರ್‌ ಎಂ ಎಸ್(ಅಂಚೆ) ಯೂನಿಯನ್ ಉಡುಪಿ ಮುಖಂಡರಾದ ದಾಮೋದರ ಭಟ್,ಎಐಬಿಇಏ ಸಂಘಟನೆಯ ಉಡುಪಿ ಜಿಲ್ಲಾ ಮುಖಂಡರಾದ ನಾಗೇಶ್ ನಾಯಕ್ ಮತ್ತು ರಮೇಶ್, ವಿಮಾ ನೌಕರರ ಸಂಘದ ಮುಖಂಡರಾದ ಕೆ.ವಿಶ್ವನಾಥ, ಪ್ರಭಾಕರ್, ಅಂಗನವಾಡಿ ನೌಕರರ ಸಂಘದ ಉಡುಪಿ ಜಿಲ್ಲಾ ಅಧ್ಯಕ್ಷ ರಾದ ಭಾರತಿ.ಎಸ್ ಮತ್ತಿತರರು ಉಪಸ್ಥಿತರಿದ್ದರು. ಜೆಸಿಟಿಯು ಉಡುಪಿ ಜಿಲ್ಲಾ ಸಂಚಾಲಕರಾದ ಕವಿರಾಜ್. ಎಸ್.ಕಾಂಚನ್ ಪ್ರಸ್ತಾವಿಕವಾಗಿ ಮಾತಾನಾಡಿ ಸ್ವಾಗತ ಮಾಡಿದರು,ಸಿಐಟಿಯು ಜಿಲ್ಲಾ ಕೋಶಾಧಿಕಾರಿ ಶಶಿಧರ ಗೊಲ್ಲ ಧನ್ಯವಾದ ಸಲ್ಲಿಸಿದರು.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles