ಉಡುಪಿ: ಜೆಡಿಎಸ್ ಬಿಜೆಪಿ ಗೆ ಮಾಡಲು ಬೇರೆ ಕೆಲಸ ಇಲ್ಲಾ ಹಾಗಾಗಿ ಈ ಸಮಾವೇಶ ಮಾಡುತ್ತಿದ್ದಾರೆ. ಎರಡು ಪಕ್ಷಗಳಿಗೆ ಬದುಕಿನ ಬಗ್ಗೆ ಚಿಂತೆ ಇಲ್ಲ,ಜನರ ಭಾವನೆಗಳ ಮೇಲೆ ಧರ್ಮದ ರಾಜಕಾರಣ ಮಾಡುತ್ತಾರೆ ಎಂದ ಡಿಸಿಎಂ ಡಿಕೆಶಿವಕುಮಾರ್ ಹೇಳಿದರು.

ಅವರು ಉಡುಪಿ ಶ್ರೀ ಕೃಷ್ಣಮಠದಲ್ಲಿ ಕಾರ್ಯಕ್ರಮದಲ್ಲಿ ಭಾಗಿಯಾಗಲು ಉಡುಪಿಗೆ ಆಗಮಿಸಿದ ವೇಳೆ ಸರ್ಕ್ಯೂಟ್ ಹೌಸ್ ಬಳಿ ಮಾಧ್ಯಮದವರೊಂದಿಗೆ ಮಾತನಾಡುತ್ತಾ, ಉಡುಪಿಗೆ, ಶ್ರೀಕೃಷ್ಣ ಮಠಕ್ಕೆ ಬಂದಿರುವುದರಲ್ಲಿ ವಿಶೇಷವೇನಿಲ್ಲ. ಕೃಷ್ಣಮಠದಿಂದ ಈ ಹಿಂದೆಯೇ ಆಹ್ವಾನ ಇತ್ತು. ಈ ಸರಕಾರ ಬಂದ ಮೇಲೆ ಬಹಳ ಸಮಯದಿಂದ ಆಹ್ವಾನ ಮಾಡುತ್ತಿದ್ದರು. ಆದರೆ ಮಠಕ್ಕೆ ಭೇಟಿ ನೀಡಲು ಆಗಿರಲಿಲ್ಲಾ ಈಗ ಬಂದಿದ್ಧೇನೆ ಎಂದರು

ಬಳಿಕ ಮೈಸೂರು ದಸರಾ- ರಾಜಮಾತೆ ಹೇಳಿಕೆ ವಿಚಾರದ ಕುರಿತು ಕೇಳಿದ ಪ್ರಶ್ನೆಗೆ ಯಾವುದೇ ಪ್ರತಿಕ್ರಿಯೆ ನೀಡದೆ ಡಿಕೆ ಶಿವಕುಮಾರ್ ತೆರಳಿದರು.