Wednesday, February 18, 2026

spot_img

ಜೆಇಇ ಮೇನ್ಸ್‌ನಲ್ಲಿ ಜನತಾ ಪಿಯು ಕಾಲೇಜು ವಿದ್ಯಾರ್ಥಿಗಳ ಸಾಧನೆ..

ಹೆಮ್ಮಾಡಿ: ಕೇಂದ್ರ ಸರ್ಕಾರದ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ ನಡೆಸಿದ ರಾಷ್ಟ್ರ ಮಟ್ಟದ ಜೆಇಇ ಮೇನ್ಸ್–2026 ಪರೀಕ್ಷೆಯಲ್ಲಿ ಹೆಮ್ಮಾಡಿಯ ಜನತಾ ಪಿಯು ಕಾಲೇಜು ವಿದ್ಯಾರ್ಥಿಗಳು ಬೈಂದೂರು ಹಾಗೂ ಕುಂದಾಪುರ ತಾಲ್ಲೂಕಿನಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ.

ಧೀರಜ್ ಜಿ.ಡಿ. (99.3604), ಮಾನ್ಯ ಪೂಜಾರಿ (98.6832), ಶ್ರೇಯಸ್ ಪಿ. ಗಾಣಿಗ (98.4693), ಶ್ರೀಧಾನ್ ಎಂ. ಶೆಟ್ಟಿ (97.5834), ಶ್ರೀರಾಮ್ ಪಿ. ಭಟ್ (97.4402), ಆಯುಷ್ ಯು. ಮೆಂಡನ್ (96.1817) ಮತ್ತು ನಹುಷ್ ಚಂದ್ರ ಬಿಲ್ಲವ (96.1127) ಪರ್ಸಂಟೈಲ್ ಅಂಕಗಳನ್ನು ಪಡೆದು ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ.

ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಹಿಂದೆ ಜೆಇಇ ತರಬೇತಿಗಾಗಿ ಕಾರ್ಕಳ, ಮಂಗಳೂರು ತೆರಳಬೇಕಾಗಿದ್ದರೂ, ಜನತಾ ಪಿಯು ಕಾಲೇಜಿನ ನುರಿತ ಉಪನ್ಯಾಸಕರ ಮಾರ್ಗದರ್ಶನದಿಂದ ಸ್ಥಳೀಯ ವಿದ್ಯಾರ್ಥಿಗಳಲ್ಲೂ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ವಿಯಾಗುವ ಆತ್ಮವಿಶ್ವಾಸ ಮೂಡಿದೆ.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles