ಮಂಗಳೂರು : ಮಂಗಳೂರಿನ ಪ್ರತಿಷ್ಠಿತ ಕಲಾ ಸಂಸ್ಥೆ ಕಲಾಭಿ ಥಿಯೇಟರ್‌ನ ‘ಪುರ್ಸನ ಪುಗ್ಗೆ’ ಎಂಬ ಜಪಾನಿ ಬುನ್ರಾಕು ಗೊಂಬೆ ನಾಟಕವು ಧಮನಿ(ರಿ) ತೆಕ್ಕಟ್ಟೆ ಸಂಸ್ಥೆಗೆ ಒಂದು ವರ್ಷ ತುಂಬಿದ ಸಂಭ್ರಮದಲ್ಲಿ ಮಾರ್ಚ್ 23ರಂದು ತೆಕ್ಕಟ್ಟೆಯ ಹಯಗ್ರೀವದಲ್ಲಿ ಪ್ರದರ್ಶನಗೊಳ್ಳಲಿದೆ. ಈ ನಾಟಕವನ್ನು ಮಾಸ್ಟರ್ ಪಪ್ಪೆಟರ್ ಶ್ರವಣ್ ಹೆಗ್ಗೋಡು ಅವರು ನಿರ್ದೇಶಿಸಿದ್ದಾರೆ. ಅಲ್ಬರ್ಟ್ ಲಾಮೋರಿಸ್ ಅವರ ರೆಡ್ ಬಲೂನ್ ಕಥೆಯಿಂದ ಈ ನಾಟಕ ಪ್ರೇರಣೆಗೊಂಡಿದೆ.

ಈ ನಾಟಕವು ಈಗಾಗಲೇ ದೆಹಲಿಯ ಶಾದಿಪುರ್ ಮಕ್ಕಳ ನಾಟಕೋತ್ಸವದಲ್ಲಿ ಮತ್ತು ಮುಂತಾದ ಪ್ರತಿಷ್ಠಿತ ವೇದಿಕೆಗಳಲ್ಲಿ ಪ್ರದರ್ಶನಗೊಂಡು ಜನಮನ್ನಣೆ ಗಳಿಸಿದೆ ಎಂದು ಕಲಾಭಿ(ರಿ) ಸಂಸ್ಥೆಯ ಅಧ್ಯಕ್ಷರಾದ ಸುರೇಶ್ ವರ್ಕಾಡಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.