ಉಡುಪಿ : ಧರ್ಮಸ್ಥಳ ಸೌಜನ್ಯ ಅತ್ಯಾಚಾರ ಕೊಲೆ ಪ್ರಕರಣ ನಡುವೆ ಕ್ಷೇತ್ರದ ಹೆಸರು ಹಾಳು ಮಾಡಲಾಗುತ್ತಿದೆ ಎನ್ನುವ ಹಿನ್ನಲೆಯಲ್ಲಿ ರಾಜ್ಯದ ಮೂಲೆ ಮೂಲೆಗಳಲ್ಲೂ ಧರ್ಮ ಸಂರಕ್ಷಣಾ ಯಾತ್ರೆಗಳು ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಶ್ರೀ ಕ್ಷೇತ್ರದ ಪರ ಧರ್ಮ ಸಂರಕ್ಷಣಾ ಯಾತ್ರೆಗೆ ಜನರ ಸಂಘಟನೆ ಮಾಡುತ್ತಿದ್ದ ಜನಜಾಗೃತಿ ವೇದಿಕೆಯ ಮಾಜಿ ಅದ್ಯಕ್ಷನೇ, ಧರ್ಮಸ್ಥಳ ಸಂಘದ ಸದಸ್ಯೆ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಪ್ರಕರಣ ಕುಂದಾಪುರ ತಾಲೂಕು ರಟ್ಟಾಡಿ ಎಂಬಲ್ಲಿ ನಡೆದಿದೆ. ಶ್ರೀ ರಟ್ಟೇಶ್ವರ ದೇವಾಸ್ಥಾನ ವ್ಯವಸ್ಥಾಪನಾ ಸಮಿತಿಯ ಮುಖ್ಯಸ್ಥ, ಉಡುಪಿ ಜಿಲ್ಲಾ ಜನಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷ ನವೀನ್ ಚಂದ್ರ ಶೆಟ್ಟಿ ರಟ್ಟಾಡಿ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿದೆ.

ಕುಂದಾಪುರ ತಾಲೂಕು ರಟ್ಟಾಡಿ ಗ್ರಾಮದ ಮಣಿಮಕ್ಕಿ ಎಂಬಲ್ಲಿ ಈ ಘಟನೆ ನಡೆದಿದೆ. ಇತ್ತಿಚೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಪರ ಹಮ್ಮಿಕೊಂಡಿದ್ದ ಧರ್ಮ ಸಂರಕ್ಷಣಾ ಯಾತ್ರೆಗೆ ಜನ ಸೇರಿಸುವ ಜವಾಬ್ದಾರಿಯನ್ನು ಆರೋಪಿ ಉಡುಪಿ ಜಿಲ್ಲಾ ಜನಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷ ನವೀನ್ ಚಂದ್ರ ಶೆಟ್ಟಿ ರಟ್ಟಾಡಿ ವಹಿಸಿಕೊಂಡಿದ್ದ. ಜನ ಸೇರಿಸುವ ಉದ್ದೇಶಕ್ಕೆ ಮನೆಮನೆಗೆ ಕರಪತ್ರ ಕರಪತ್ರ ಹಂಚುವ ಕಾರ್ಯ ನಡೆಸುತ್ತಿದ್ದಾಗ, ಧರ್ಮಸ್ಥಳ ಸಂಘದ ಸದಸ್ಯೆ, ವಿವಾಹಿತ ಮಹಿಳೆಗೆ ಕರೆ ಮಾಡಿ, ಹೆಚ್ಚುವರಿ ಕರಪತ್ರಗಳನ್ನು ತನ್ನ ಮನೆಗೆ ತಂದುಕೊಡುವಂತೆ ನವೀನ್ ಚಂದ್ರ ಶೆಟ್ಟಿ ಹೇಳಿದ್ದನೆನ್ನಲಾಗಿದೆ. ಮಧ್ಯಾಹ್ನ ವೇಳೆ ಮನೆಗೆ ತೆರಳಿದಾಗ, ಕರಪತ್ರ ಪಡೆಯುವಾಗ ಸಂತ್ರಸ್ತೆಯ ಕೈಯನ್ನು ನವೀನ್ ಚಂದ್ರ ಶೆಟ್ಟಿ ಸ್ವರ್ಶಿಸಿದ್ದಾನೆ. ಇದರಿಂದ ಯುವತಿಗೆ ಮುಜುಗರ ಉಂಟಾಗಿದ್ದು ನಂತರ ಆಕೆ ಹೊರಡಲು ಅನುವಾದಾಗ, ಎರಡು ನಿಮಿಷ ನಿಲ್ಲುವಂತೆ ಒತ್ತಾಯಿಸಿದ ಆರೋಪಿ ಹತ್ತಿರಕ್ಕೆ ಎಳೆದುಕೊಂಡು ಬಲ ಕೆನ್ನೆಗೆ ಚುಂಬಿಸಿ, ಲೈಂಗಿಕ ದೌರ್ಜನ್ಯ ಎಸೆಗಿದ್ದಾನೆ. ಭಯಗೊಂಡ ಅಲ್ಲಿನ ನಿರ್ಗಮಿಸಿದ ಸಂತ್ರಸ್ತೆಯಲ್ಲಿ, ಕೆಲಸ ಮುಗಿದ ಬಳಿಕ ಮರಳಿ ಬರುವಂತೆ ಆರೋಪಿ ಹಿಂಬಾಲಿಸಿಕೊಂಡು ಬಂದಿದ್ದಾನೆ ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ.

ಈ ಪ್ರಕರಣದ ಕುರಿತು ಸಂತ್ರಸ್ತೆ ತನ್ನ ಮನೆಯಲ್ಲಿ ತಿಳಿಸಿ ಅಮಾವಾಸ್ಯೆ ಬೈಲು ಪೊಲೀಸ್ ಠಾಣೆಗೆ ದೂರು ದಾಖಲಿದ್ದಾರೆ. ಇನ್ನು ಪ್ರಕರಣದ ಕುರಿತು ರಾಜಿ ಸಂಧಾನ ನಡೆಸಲು ಪ್ರಯತ್ನಿಸಿದ್ದು, ಸಂತ್ರಸ್ತೆಯ ಮನೆಯವರು ನಿರಾಕರಿಸಿದ್ದಾರೆ ಎನ್ನಲಾಗಿದೆ. ಸದ್ಯ ಆರೋಪಿ ತಲೆಮರೆಸಿಕೊಂಡಿದ್ದಾನೆ ಎನ್ನಲಾಗಿದ್ದು, ಪೊಲೀಸ್ ರು ಆರೋಪಿಯ ಪತ್ತೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಸದ್ಯ ಪ್ರಕರಣ ವಿಚಾರ ಸಾರ್ವಜನಿಕವಾಗಿದ್ದು ಧರ್ಮಸ್ಥಳದ ಸಂಘದ ಸದಸ್ಯೆಗೆ ರಕ್ಷಣೆ ಇಲ್ಲಾ ನಮ್ಮ ಪರಿಸ್ಥಿತಿ ಹೇಗೆ ಎಂದು ಸ್ಥಳೀಯರು ಮಾತನಾಡಿಕೊಳ್ಳುತ್ತಿದ್ದಾರೆ.