ಕೋಟ: ಸಾಲಿಗ್ರಾಮದ ಚೇಂಪಿ ವಿಶ್ವಕರ್ಮ ಸಭಾಂಗಣದಲ್ಲಿ ಕೋಟ ವಿರಾಡ್ವಿವಿಶ್ವಬ್ರಾಹ್ಮಣ ಸಮಾಜೋದ್ಧಾರಕ ಸಂಘ ಸಾಲಿಗ್ರಾಮ, ವಿಶ್ವಕರ್ಮ ಕಲಾವೃಂದ ಸಾಲಿಗ್ರಾಮ, ವಿಶ್ವಜ್ಯೋತಿ ಮಹಿಳಾ ಬಳ ಸಾಲಿಗ್ರಾಮ ಇವರುಗಳ ಆಶ್ರಯದಲ್ಲಿ ವಿಶ್ವಕರ್ಮ ಯಜ್ಞ ಮಹೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರಗಿದವು

ವಿಶ್ವಮರ್ಕ ಯಜ್ಞಮಹೋತ್ಸವವು ವಿರಾಡ್ವಿವಿಶ್ವಬ್ರಾಹ್ಮಣ ಸಂಘದ ಅಧ್ಯಕ್ಷ ಎಂ ಸುಬ್ರಾಯ ಆಚಾರ್ಯ ಇವರ ಮುಂದಾಳತ್ವದಲ್ಲಿ ಪುರೋಹಿತರಾದ ಲಕ್ಷ್ಮೀ ಕಾಂತ್ ಶರ್ಮ ಸಮ್ಮುಖದಲ್ಲಿ ಧಾರ್ಮಿಕ ಪೂಜೆ ನೆರವೇರಿತು. ಅಪರಾಹ್ನ ಮಹಾಅನ್ನಪ್ರಸಾದ ವಿತರಣೆ, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಪನ್ನಗೊಂಡವು.

ವಿಶ್ವಕರ್ಮ ಸಮಾಜೋದ್ಧಾರಕ ಸಂಘದ ಗೌರವಾಧ್ಯಕ್ಷ ಜನಾರ್ದನ ಆಚಾರ್ಯ ಚೇಂಪಿ, ಉಪಾಧ್ಯಕ್ಷರಾದ ಗೋವರ್ಧನ ಆಚಾರ್ಯ, ಕಾರ್ಯದರ್ಶಿ ರಮೇಶ್ ಆಚಾರ್ಯ ಚೇಂಪಿ, ಕೋಶಾಧಿಕಾರಿ ಕೃಷ್ಣಯ್ಯ ಆಚಾರ್ಯ, ಕಲಾವೃಂದದ ಅಧ್ಯಕ್ಷ ವೆಂಕಟೇಶ ಆಚಾರ್ಯ, ಕಾರ್ಯದರ್ಶಿ ನಾಗರಾಜ್ ಆಚಾರ್ಯ, ಕೋಶಾಧಿಕಾರಿ ಪದ್ಮನಾಭ ಆಚಾರ್ಯ ಬನ್ನಾಡಿ, ವಿಶ್ವಜ್ಯೋತಿ ಮಹಿಳಾ ಬಳಗದ ಅಧ್ಯಕ್ಷೆ ರಮ್ಯ ರಮೇಶ್ ಆಚಾರ್ಯ, ಕಾರ್ಯದರ್ಶಿ ಸಹನಾ ರಾಘವೇಂದ್ರ ಆಚಾರ್ಯ, ಕೋಶಾಧಿಕಾರಿ ಸುಶೀಲ ಸುರೇಶ್ ಆಚಾರ್ಯ ಹಾಗೂ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
