Wednesday, March 4, 2026

spot_img

ಗೋಣಿ ಚೀಲದಲ್ಲಿ ಅಕ್ರಮ ಮರಳು ಸಾಗಾಟ: ಆರೋಪಿಗಳು ವಶಕ್ಕೆ

ಕುಂದಾಪುರ: ಕುಂದಾಪುರ ಚರ್ಚ ರಸ್ತೆಯ ಬಳಿಯಿರುವ ಪಂಚಗಂಗಾವಳಿ  ಹೊಳೆಯಲ್ಲಿ ಮರಳನ್ನು ತೆಗೆದು ಎರಡು ವಾಹನಗಳಲ್ಲಿ ತುಂಬಿಸುತ್ತಿದ್ದ ಇಬ್ಬರನ್ನು ಕುಂದಾಪುರ ಪೊಲೀಸ್‌ ರು ಬಂಧಿಸಿದ್ದಾರೆ. ಕಸಬಾ ನಿವಾಸಿಗಳಾದ ಸುಜನ್‌ ಸಾರಂಗ್‌(35), ನಿಖಿಲ್‌(30) ಅಕ್ರಮ ಮರಳು ತೆಗೆಯುತ್ತಿದ್ದ ಆರೋಪಿಗಳು.

 ಇವರು ಚರ್ಚ್‌ ರಸ್ತೆಯ ಬಳಿ  ಮಹೇಂದ್ರ ಮ್ಯಾಕ್ಸಿಮೊ ವಾಹನದಲ್ಲಿ 40 ಪ್ಲಾಸ್ಟಿಕ್‌ ಚೀಲಗಳಲ್ಲಿ ಪಂಚಾಗಂಗಾವಳಿ ಹೊಳೆಯ ಮರಳನ್ನು ತುಂಬಿಸಿ ಇಟ್ಟಿದ್ದರು. ಬೀಟ್‌ ಪೊಲೀಸ್‌ ರು ಹತ್ತಿರ ತೆರಳಿ ಗಮನಿಸಿದಾಗ ಅಕ್ರಮ ಮರಳು ಗೋಣಿ ಚೀಲದಲ್ಲಿ ತುಂಬಿ ಸಾಗಿಸುತ್ತಿರುವುದು ಕಂಡು ಬಂದಿದೆ. ಹೀಗಾಗಿ ಆರೋಪಿಗಳನ್ನು ವಶಕ್ಕೆ ಪಡೆದು ಕೃತ್ಯಕ್ಕೆ ಬಳಸಿದ ಮಹೇಂದ್ರ ಮ್ಯಾಕ್ಸಿ ಮತ್ತು ಟಾಟಾ ಎಸ್‌ ಗಾಡಿ ವಶಕ್ಕೆ ಪಡೆದಿದ್ದಾರೆ. ಇದರ ಜೊತೆ ೪ ಸಾವಿರ ಮೌಲ್ಯದ 40 ಬ್ಯಾಗ್ ಪಾಲಿತೀನ್‌ ಚೀಲದಲ್ಲಿರುವ ಮರಳು ಮರಳನ್ನ ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ. 

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles