Friday, May 9, 2025

spot_img

ಗುಂಡ್ಮಿ – ಮಾಣಿ ಚೆನ್ನಕೇಶವ ದೇಗುಲದ ವಾರ್ಷಿಕ ಜಾತ್ರೋತ್ಸವ ಸಡಗರ

ಕೋಟ: ಇಲ್ಲಿನ ಸಾಸ್ತಾನದ ಗುಂಡ್ಮಿ ಶ್ರೀ ಮಾಣಿ ಚೆನ್ನಕೇಶವ ದೇಗುಲದ ವಾರ್ಷಿಕ ಜಾತ್ರೋತ್ಸವ ಎ.೯ರಿಂದ ಮೊದಲ್ಗೊಂಡು ಎ.೧೪ ರ ತನಕ ನಡೆಯಲಿದೆ ಈ ಪ್ರಯುಕ್ತ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿದೆ. ಧಾರ್ಮಿಕ ಕಾರ್ಯಕ್ರಮಗಳು ಎ.೦೯-೦೪-೨೦೨೫ ಬುಧವಾರ ಅಸ್ತಮಾನಕ್ಕೆ ಶ್ರೀ ದೇವರಿಗೆ ಮುಹೂರ್ತ ಬಲಿ ಮತ್ತು ಅಂಕುರಾರೋಪಣ, ಎ.೧೦ರ ಗುರುವಾರ ಬೆಳಿಗ್ಗೆ ಗಂಟೆ ೧೦-೪೮ಕ್ಕೆ ಧ್ವಜಾರೋಹಣ ಮತ್ತು ದಿ| ಕೃಷ್ಣ ಐತಾಳ, ಅಗ್ರಹಾರ, ಗುಂಡ್ಮಿ ಇವರ ಮಕ್ಕಳಿಂದ ಸೇವಾರ್ಥವಾಗಿ ಶ್ರೀ ವಿಶ್ವೇಶ್ವರ ದೇವರ ಪ್ರತಿಷ್ಠಾ ವರ್ಧಂತಿ ರಾತ್ರಿ ಬಲಿ, ಕಟ್ಟೆ ಪೂಜೆ, ಪುಷ್ಪ ರಥೋತ್ಸವ, ಕಿರಿರಂಗಪೂಜೆ ,ಎ.೧೧ರ ಶುಕ್ರವಾರ ದಿ| ಶ್ರೀನಿವಾಸ ರಾವ್ ದೊಡ್ಡನೆ ಸ್ಮರಣಾರ್ಥ ಜಿ. ಎಸ್. ಚನ್ನಕೇಶವಮೂರ್ತಿ ಮತ್ತು ಸಹೋದರರು, ದೊಡ್ಡನೆ ಬೆಂಗಳೂರು ಇವರ ಸೇವಾರ್ಥವಾಗಿ ರಾತ್ರಿ ಬಲಿ, ಕಟ್ಟೆಪೂಜೆ, ಪುಷ್ಪರಥೋತ್ಸವ, ಹಿರಿರಂಗಪೂಜೆ,ಎ. ೧೨ರ ಶನಿವಾರ ಗುಂಡ್ಮಿ ದಿ.ಬಾಲಯ್ಯನವರ ಮಕ್ಕಳಿಂದ ಸೇವಾರ್ಥವಾಗಿ ಬೆಳಿಗ್ಗೆ ಗಂಟೆ ೧೧-೦೦ಕ್ಕೆ ರಥಾರೋಹಣ,ಮಧ್ಯಾಹ್ನ ಅನ್ನಸಂತರ್ಪಣೆ ಸಂಜೆ ೬.೦೦ ರಿಂದ ರಥಾವರೋಹಣ, ಅಷ್ಟಾವಧಾನ ಸೇವೆ, ಉಪಾಹಾರ ವಿತರಣೆ, ಶಯನೋತ್ಸವ ,ಎ.೧೩ ಭಾನುವಾರ ಬೆಳಿಗ್ಗೆ ಪ್ರಬೋಧೋತ್ಸವ ರಾತ್ರಿ ಚೂರ್ಣೋತ್ಸವ, ಕಟ್ಟೆ ಪೂಜೆ, ಪಲ್ಲಕ್ಕಿ ಉತ್ಸವ, ಅವಭ್ರತ ಸ್ನಾನ, ಧ್ವಜಾವರೋಹಣ, ೧೪ ರ ಸೋಮವಾರ ಬೆಳಿಗ್ಗೆ ಸಂಪ್ರೋಕ್ಷಣೆ ಜರಗಲಿದೆ. ಸಾಂಸ್ಕೃತಿಕ ಪರ್ವ ಅಂಗವಾಗಿ ಎ.೧೦ರ ಗುರುವಾರ ಸಂಜೆ ೭.೩೦ರಿಂದ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ ಹನುಮಗಿರಿ ಇವರಿಂದ ಯಕ್ಷಗಾನ ಬಯಲಾಟ ಕಾಲಮಿತಿ ಪ್ರಸಂಗ ಅಮರೇಂದ್ರ ಪದ ವಿಜಯಿ ಪ್ರದರ್ಶನಗೊಳ್ಳಲಿದ್ದು ,ಎ.೧೨ರ ಶನಿವಾರ ಶ್ರೀ ದೇವರ ಬ್ರಹ್ಮರಥೋತ್ಸವ ಹಾಗೂ ಅನ್ನಸಂತರ್ಪಣೆ,ಸಂಜೆ ರಥೋತ್ಸವದ ಪುರಮೆರವಣಿಗೆ ಸಂದರ್ಭದಲ್ಲಿ ಚಿಲಿಪಿಲಿ ಬೊಂಬೆಗಳ ನೃತ್ಯ ತಂಡ, ಕಲ್ಲಡ್ಕ ಬಂಟ್ವಾಳ ಇವರಿಂದ ಆಕರ್ಷಣೆಯ ವೇಷಗಳು, ಕೀಲುಕುದುರೆ,ಶ್ರೀ ಪಂಜುರ್ಲಿ ಭಜನಾ ತಂಡ,ಗುಂಡ್ಮಿ ರಥಬೀದಿ ಇವರಿಂದ ಕುಣಿತ ಭಜನೆ ಹಾಗೂ ಸುಡುಮದ್ದು ಪ್ರದರ್ಶನ ೯-೩೦ಕ್ಕೆ ಶ್ರೀ ಗುರುಪ್ರಸಾದಿತ ಯಕ್ಷಗಾನ ಮಂಡಳಿ ಸಾಲಿಗ್ರಾಮ ಇವರಿಂದ ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ. ರಾತ್ರಿ ಗಂಟೆ ೮.೦೦ರಿಂದಸ್ಥಳೀಯ ಮಹಿಳಾ ಬಳಗದವರಿಂದ ನೃತ್ಯೋತ್ಸವ ಎ. ೧೩ಭಾನುವಾರ ರಾತ್ರಿ ಗಂಟೆ ೯.೩೦ಕ್ಕೆ ಓಂಕಾರ್ ಕಲಾವಿದರು ಕನ್ನುಕೆರೆ-ತೆಕ್ಕಟ್ಟೆ ಈ ವರ್ಷದ ಹೊಚ್ಚಹೊಸ ಸಾಮಾಜಿಕ ಹಾಸ್ಯಮಯ ನಗೆ ನಾಟಕ ಅಪುದೆಲ್ಲಾ ಒಳ್ಳೆದಕ್ಕೆ ನಾಟಕ ಪ್ರದರ್ಶನಗೊಳ್ಳಲಿದೆ.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles