Wednesday, March 4, 2026

spot_img

ಗಂಗೊಳ್ಳಿ ಪೊಲೀಸ್‌ ಹೆಡ್‌ ಕಾನ್ಸಟೇಬಲ್ ನಿಧನ

ಗಂಗೊಳ್ಳಿ : ಉಡುಪಿ ಜಿಲ್ಲೆಯ ಪೊಲೀಸ್ ಘಟಕದಲ್ಲಿ ಕಳೆದ 28 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದು, ಹೆಡ್‌ ಕಾನ್ಸಟೇಬಲ್ ರಾಮಚಂದ್ರ ಶೇರುಗಾ‌ರ್ ಅವರು ಅನಾರೋಗ್ಯದಿಂದ ಇಂದು  ಮರಣ ಹೊಂದಿರುತ್ತಾರೆ.  ಕಳೆದ 3 ವರ್ಷ ಗಳಿಂದ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್ಸ್ ಟೇಬಲ್  ಕರ್ತವ್ಯ ನಿರ್ವಹಿಸುತ್ತಿದ್ದರು. ಒಂದು ವಾರದ ಹಿಂದೆ ಅನಾರೋಗ್ಯದಿಂದ ಬಳಲುತ್ತಿದ್ದ ಶೇರುಗಾ‌ರ್ ಅವರನ್ನು ಮಣಿಪಾಲದ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ವೇಳೆ ಅವರು ಅಸುನೀಗಿದ್ದಾರೆ. ರಾಮಚಂದ್ರ ಅವರ ನಿಧನಕ್ಕೆ ಉಡುಪಿ ಜಿಲ್ಲಾ ಪೊಲೀಸ್‌ ಇಲಾಖೆ, ಕುಟುಂಬಿಕರು, ಬಂಧುಮಿತ್ರು ಕಂಬನಿ ಮಿಡಿದಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles