ಉಡುಪಿ : ಖ್ಯಾತ ಡ್ರಮ್ಸ್ ವಾದಕ ಹಾಗೂ ಪದ್ಮಶ್ರೀ ಪುರಸ್ಕೃತ ಶ್ರೀ ಶಿವಮಣಿ ಅವರು ಶನಿವಾರದಂದು ಶ್ರೀ ಕ್ಷೇತ್ರ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಳಕ್ಕೆ ಆಗಮಿಸಿ ದೇವರ ದರ್ಶನ ಪಡೆದರು. ಈ ಸಂದರ್ಭದಲ್ಲಿ ಕ್ಷೇತ್ರದ ವತಿಯಿಂದ ಅವರಿಗೆ ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಕ್ಷೇತ್ರಾಧ್ಯಕ್ಷ ಗಿರಿಧರ್ ಸುವರ್ಣ, ಪ್ರಧಾನ ಅರ್ಚಕ ರಾಘವೇಂದ್ರ ಉಪಾಧ್ಯಾಯ, ನಾರಾಯಣ ಸಿ. ಕರ್ಕೇರ, ಸುಜಿತ್ ಕುಮಾರ್ ಸೇರಿದಂತೆ ಅನೇಕ ಗಣ್ಯರು ಹಾಗೂ ಭಕ್ತರು ಉಪಸ್ಥಿತರಿದ್ದರು.

ದರ್ಶನದ ಬಳಿಕ ಶ್ರೀ ಶಿವಮಣಿ ದೇವಸ್ಥಾನದ ಧಾರ್ಮಿಕ ವಾತಾವರಣವನ್ನು ಮೆಚ್ಚಿ, ದೇವಿಯ ಕೃಪೆಯು ಸದಾ ಜನರ ಮೇಲಿದೆ ಎಂದು ಹಾರೈಸಿದರು.



