ಉಡುಪಿಯ ಹೆಸರಾಂತ ಖಾಸಗಿ ಶಾಲೆಯೊಂದಕ್ಕೆ ಇಂದು ಈ ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದ ಹಿನ್ನಲೆಯಲ್ಲಿ ಆತಂಕದ ವಾತವರಣ ಸೃಷ್ಠಿಯಾಗಿತ್ತು. ಈ ಮೇಲ್ ಬೆದರಿಕೆ ಹಿನ್ನಲೆಯಲ್ಲಿ ಉಡುಪಿಯ ಪೊಲೀಸ್ ರು ಶಾಲೆಗೆ ತೆರಳಿ ಬಹುಕಾಲ ಶೋಧ ನಡೆಸಿದರು.

ಶೋಧ ಕಾರ್ಯದಲ್ಲಿ ಶ್ವಾನದಳ, ವಿಧ್ವಂಸಕ ನಿಗ್ರಹ ತಂಡ ಮತ್ತು ಬಾಂಬ್ ನಿಷ್ಕ್ರೀಯ ದಳ ಭಾಗಿಯಾಗಿದ್ದು, ಶಾಲೆಯ ಆವರಣದಲ್ಲಿ ಶೋಧ ನಡೆಸಲಾಯಿತು. ಶಾಲೆಯ ಮೂಲೆ ಮೂಲೆ ಪರಿಶೀಲನೆ ನಡೆಸಿದ ಬಳಿಕ ಯಾವುದೇ ಬಾಂಬ್ ಅಥವಾ ಅಪಾಯಕಾರಿ ವಸ್ತುಗಳು ಪತ್ತೆಯಾಗಿಲ್ಲ. ಬಳಿಕ ಇದು ಹುಸಿ ಬಾಂಬ್ ಬೆದರಿಕೆ ಈ ಮೇಲ್ ಆಗಿದೆ ಎಂದು ಪೊಲೀಸ್ ರು ದೃಢಪಡಿಸಿದ್ದಾರೆ. ಸಂಪೂರ್ಣ ತಪಾಸಣೆಯ ಬಳಿ ಶಾಲೆಯನ್ನು ಆಡಳಿತ ಮಂಡಳಿಗೆ ಬಿಟ್ಟುಕೊಡಲಾಯಿತು. ಇನ್ನು ಹುಸಿ ಬಾಂಬ್ ಈ ಮೇಲ್ ಮಾಡಿದ ಮೇಲ್ ಐಡಿ ಹಿಡಿದು ತನಿಖೆ ನಡೆಸಲು ಭರವಸೆಯನ್ನು ಪೊಲೀಸ್ ರು ನೀಡಿದ್ದಾರೆ.