ಉಡುಪಿ : ತೆಕ್ಕಟ್ಟೆ ಗ್ರಾಮದ ಜನಪ್ರೀಯ ಕಾಂಪ್ಲೆಕ್ಸ್‌ನ ಮೊದಲ ಮಹಡಿಯಲ್ಲಿರುವ ಎಸ್.ಪಿ. ಕ್ರಿಯೇಶನ್ ಕ್ಲಬ್ ನಲ್ಲಿ ಹಣವನ್ನು ಪಣವಾಗಿಟ್ಟು ಇಸ್ಪೀಟ್ ಜುಗಾರಿ ಆಡುತ್ತಿದ್ದರೆಂಬ ಖಚಿತ ಮಾಹಿತಿಯ ಮೇರೆಗೆ ಕೋಟ ಠಾಣೆ ಪೊಲೀಸರು ದಾಳಿ ನಡೆಸಿ ಏಳು ಮಂದಿಯನ್ನು ಬಂಧಿಸಿದ್ದಾರೆ.

ಪಿಎಸ್‌ಐ ಪ್ರವೀಣ್ ಕುಮಾರ್ ಅವರ ನೇತೃತ್ವದಲ್ಲಿ ನಡೆದ ಈ ದಾಳಿಯಲ್ಲಿ ಶ್ರೀನಿವಾಸ (63), ಸೂರ್ಯ (51), ಚಂದ್ರಹಾಸ (40), ಕೃಷ್ಣ (46), ಫುರಂದರ (44), ರಜಾಕ್ (52), ಸದಾಶಿವ ದೇವಾಡಿಗ (48) ಅವರನ್ನು ಬಂಧಿಸಲಾಗಿದೆ. ಪೊಲೀಸರು ಸ್ಥಳದಿಂದ ನಗದು, ಇಸ್ಪೀಟ್ ಆಟಕ್ಕೆ ಬಳಸುವ ವಸ್ತುಗಳು, ಮೊಬೈಲ್ ಫೋನ್‌ಗಳು 7, ಸಿಸಿ ಟಿವಿ ಡಿವಿಆರ್ ಮತ್ತು ಮಾನಿಟರ್, ಕ್ಲಬ್ ಲೆಡ್ಜರ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಕುರಿತು ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಪ್ರಗತಿಯಲ್ಲಿದೆ.


