ಉಡುಪಿ: ಗಂಗೊಳ್ಳಿ ಗುಜ್ಜಾಡಿ ಗ್ರಾಮದ ಮಂಕಿಯ ದ್ಯಾಸನಮಕ್ಕಿ ಎಂಬಲ್ಲಿನ ಸಾರ್ವಜನಿಕ ಸ್ಥಳದಲ್ಲಿ ಕೋಳಿ ಅಂಕ ಜುಗಾರಿ ಆಟ ಆಡುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸ್ ರು ವಶಕ್ಕೆ ಪಡೆದ ಘಟನೆ ನಡೆದಿದೆ. ರವೀಂದ್ರ, ಸುಧಾಕರ ಪೂಜಾರಿ ಮತ್ತು ವಿಕ್ರಮ್ ಬಂಧಿತ ಆರೋಪಿಗಳು.

ಆರೋಪಿತರು ದ್ಯಾಸನಮಕ್ಕಿ ಎಂಬಲ್ಲಿನ ಕೋಳಿಗಳಿಗೆ ಕಾಲಿಗೆ ಕತ್ತಿಕಟ್ಟಿ ಹಿಂಸೆ ನೀಡಿ ಕೋಳಿಗಳ ಮೇಲೆ ಹಣವನ್ನು ಪಣವಾಗಿ ಕಟ್ಟಿ ಸಾರ್ವಜನಿಕ ಸ್ಥಳದಲ್ಲಿ ಕೋಳಿಅಂಕ ಜುಗಾರಿ ಆಡುತ್ತಿರುವ ಬಗ್ಗೆ ಗಂಗೊಳ್ಳಿ ಪೊಲೀಸ್ ರಿಗೆ ಮಾಹಿತಿ ಲಭಿಸಿದ ಹಿನ್ನಲೆ ಧಾಲಿ ನಡೆಸಿದ್ದಾರೆ. ಈ ವೇಳೆ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ಉಳಿದವರು ಓಡಿ ಹೋಗಿದ್ದಾರೆ. ಕೋಳಿ ಜುಗಾರಿ ಆಟಕ್ಕೆ ಬಳಸಿದ 5 ಕೋಳಿ ಹುಂಜ, 5 ಕತ್ತಿ (ಕೋಳಿಬಾಳು) ಹಾಗೂ ಕೋಳಿಯ ಕಾಲಿಗೆ ಕೋಳಿ ಬಾಳನ್ನು ಕಟ್ಟಲು ಉಪಯೋಗಿಸಿದ ಹಗ್ಗ ಹಾಗೂ ಕೋಳಿಗಳ ಮೇಲೆ ಹಣವನ್ನು ಪಣವಾಗಿ ಕಟ್ಟಿದ್ದು ನಗದು ಹಣ 2200/- ರೂಪಾಯಿ ಮೂರು ಬೈಕ್ ಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಕುರಿತು ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.