Thursday, October 23, 2025

spot_img

ಕೋಡಿ-ಬೆಂಗ್ರೇ ಹಂಗಾರಕಟ್ಟೆ ಬಾರ್ಜ್ ಲೋಕಾರ್ಪಣೆ

ಉಡುಪಿ: ಸುಮಾರು 2,05.78,040 ರೂಪಾಯಿ ವೆಚ್ಚದಲ್ಲಿ ಕೋಡಿ- ಬೆಂಗ್ರೇ ಹಂಗಾರಕಟ್ಟೆ ನದಿಯ ನಡುವೆ ಸಂಪರ್ಕ ಕಲ್ಪಿಸುವ ಮದ್ಯಮ ಗಾತ್ರದ ಹೊಸ ಬಾರ್ಜ್ ಕಾವೇರಿ ಅನ್ನು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲ ಸಾರಿಗೆ ಸಚಿವ ಮಾಂಕಾಳ ವೈದ್ಯ ಬಾರ್ಜ್ ಅನ್ನು ಲೋಕಾರ್ಪಣೆಗೊಳಿಸಿದರು

ಬಳಿಕ ಮಾತನಾಡಿದ ಅವರು, ಕೋಡಿ ಬೆಂಗ್ರೆ ಹಂಗಾರಕಟ್ಟೆಗೆ ಸ್ಥಳೀಯ ಜನರು ಹಾಗೂ ಪ್ರವಾಸಕ್ಕೆಂದು ಆಗಮಿಸಿರುವ ಪ್ರಾವಸಿಗರಿಗೂ ಸಹ ಕಡಿಮೆ ಅವಧಿಯಲ್ಲಿ ಪ್ರಯಾಣ ಬೆಳಸಲು ಅನುಕೂಲವಾಗಲಿದೆ. ಬಾರ್ಜ್ ಇಲ್ಲದಿದ್ದಲ್ಲಿ ರಸ್ತೆ ಮೂಲಕ ಸುತ್ತುವರಿದು ಹೋಗಬೇಕಿತ್ತು ಎಂದ ಅವರು ಮುಂದಿನ ದಿನಗಳಲ್ಲಿ ಸ್ಥಳೀಯ ಜನರಿಗೆ ಅನುಕೂಲವಾಗುವ ರೀತಿಯಲ್ಲಿ ಸೇತುವೆ ನಿರ್ಮಾಣ ಕಾಮಗಾರಿಯನ್ನು ಕೈಗೊಳ್ಳಲಾಗುವುದು ಎಂದರು.

ಹಂಗಾರಕಟ್ಟೆ ಬಂದರಿನಲ್ಲಿ ಮೀನುಗಾರಿಕಾ ಪೂರಕ ಚಟುವಟಿಕೆಗಳನ್ನು ಕೈಗೊಳ್ಳಲು ಅನುಕೂಲವಾಗುವ ರೀತಿಯಲ್ಲಿ ಬಂದರಿನ ಅಭಿವೃದ್ದಿ ಕಾರ್ಯಗಳನ್ನು ಕೈಗೊಳ್ಳಲಾಗುವುದು ಹಾಗೂ ಇದರ ಜೊತೆಯಲ್ಲಿ ಹೂಳೆತ್ತುವ ಕಾರ್ಯವನ್ನು ಮಾಡಲಾಗುವುದು ಎಂದ ಅವರು, ಶೆಡ್ ನ ನಿರ್ಮಾಣದ ಕಾಮಗಾರಿಯನ್ನು ೫೦ಲಕ್ಷ ರೂ ಗಳಲ್ಲಿ ಕೈಗೊಳ್ಳಲು ಅಧಿಕಾರಿಗಳು ಕಾರ್ಯ ಪ್ರವೃತ್ತರಾಗಿದ್ದಾರೆ ಇದನ್ನು ಉನ್ನತೀಕರಣಗೊಳಿಸುವುದರೊಂದಿಗೆ ಅಭಿವೃದಿ ಪಡಿಸಬೇಕು. ಸರ್ಕಾರದ ಮಟ್ಟದಲ್ಲಿ ಎಲ್ಲ ರೀತಿಯ ಸಹಕಾರ ನೀಡಲಾಗುವುದು. ಕೋಡಿ-ಬೆಂಗ್ರೆ ಗ್ರಾಮವು ಈಗಾಗಲೇ ತಂಬಾಕು ಮುಕ್ತ ಗ್ರಾಮವನ್ನಾಗಿ ಘೋಷಿಸಲಾಗಿದೆ. ಸ್ಥಳೀಯ ಜನರು ವ್ಯಸನ ಮುಕ್ತವಾಗಿರುವುದು ಒಂದು ಉತ್ತಮ ಕಾರ್ಯವಾಗಿದ್ದು ಇದರಿಂದ ಜನರ ಆರೋಗ್ಯ ಹೆಚ್ಚಿನ ಸುಧಾರಣೆ ಸಾಧ್ಯವಾಗುತ್ತದೆ. ಇದರಿಂದ ಮುಂದುವರಿಸಿಕೊಂಡು ಹೋಗಬೇಕು ಎಂದರು.

ಕಾರ್ಯಕ್ರಮದಲ್ಲಿ ಮೀನುಗಾರಿಕಾ ಇಲಾಖೆ ಜಂಟಿ ನಿರ್ದೇಶಕ ವಿವೇಕ್, ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಕುಸುಮ, ಮುಖಂಡರುಗಳಾದ ದಿನೇಶ್ ಹೆಗ್ಡೆ, ರಾಜು ಬಂಗೇರ, ಪ್ರಸಾದ್ ಪಿಂಗಳಾಯ ಮತ್ತಿತರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles