ಕೋಟ: ಸರಕಾರಿ ಸೌಲಭ್ಯಗಳನ್ನು ಪಡೆಯಬೇಕಾದರೆ ಆಧಾರ್ ಸಮಸ್ಯೆ ಎದುರಿಸುತ್ತಿರುವುದು ಕಾಣುತ್ತೇವೆ ಅದನ್ನು ಆಗಾಗ ಅಪ್‌ಡೆಟ್ ಮಾಡಿಕೊಳ್ಳಿ ಎಂದು ಭಾರತೀಯ ಅಂಚೆ ವಿಭಾಗದ
ಕುಂದಾಪುರ ವಿಭಾಗದ ಮಾರ್ಕೆಟಿಂಗ್ ವಿಭಾಗ ಜೀವನ್ ಕುಮಾರ್ ನುಡಿದರು. ಬುಧವಾರ ಕೋಡಿ ಪಂಚಾಯತ್‌ನಲ್ಲಿ ಭಾರತೀಯ ಅಂಚೆ ವಿಭಾಗ ಉಡುಪಿ ,ಕೋಡಿ ಗ್ರಾಮಪಂಚಾಯತ್,
ಸಮನ್ವಯ ಸಂಜೀವಿನಿ ಒಕ್ಕೂಟ ,ಏಜುಕೇರ್ ಕೋಟ ಇವರ ನೇತೃತ್ವದಲ್ಲಿ ಕೋಟದ ಪಂಚವರ್ಣ ಸಂಘಟನೆಯ ಸಂಯೋಜನೆಯೊಂದಿಗೆ ಉಚಿತ ಆಧಾರ್ ಕಾಡ್೯ ಅಭಿಯಾನ ಹಾಗೂ ಪಿ ಎಂ
ವಿಶ್ವಕರ್ಮ ಯೋಜನೆ, ಆಟೋ ಚಾಲಕರಿಗೆ ಈ ಕಾಡ್೯, ಮೀನುಗಾರ ಕಾಡ್೯ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಭಾರತೀಯ ಅಂಚೆ ಇಲಾಖೆ ಜನಸಾಮಾನ್ಯರಿಗೆ ಸ್ಪಂದಿಸುವ ಕಾರ್ಯಕ್ರಮಗಳನ್ನು ನೀಡುತ್ತಿದೆ ಕೇಂದ್ರ ಸರಕಾರದ ಕೆಲ ಯೋಜನೆಗಳನ್ನು ಹಾಗೂ ಅಪಘಾತ ವಿಮಾಯೋಜನೆಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೋಡಿ ಗ್ರಾಮಪಂಚಾಯತ್ ಅಧ್ಯಕ್ಷೆ ಗೀತಾ ಕಾರ್ವಿ ವಹಿಸಿದ್ದರು. ಮುಖ್ಯ ಅಭ್ಯಾಗತರಾಗಿ ಭಾರತೀಯ ಅಂಚೆ ಇಲಾಖೆಯ ಕುಂದಾಪುರ ವಿಭಾಗದ ಮಹೇಂದ್ರ
ಕುಮಾರ್, ಕೋಡಿ ಗ್ರಾಮಪಂಚಾಯತ್ ಸದಸ್ಯರಾದ ಪ್ರಭಾಕರ್ ಮೆಂಡನ್, ಕೃಷ್ಣ ಪೂಜಾರಿ ಪಿ,ಮಹಿಳಾಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಲಕ್ಷ್ಮೀ, ಸಮಸ್ವಯ ಸಂಜೀವಿನಿ
ಒಕ್ಕೂಟದ ಅಧ್ಯಕ್ಷೆ ದೀಪಾ ಕಾರ್ವಿ, ಪಂಚವರ್ಣ ಯುವಕ ಮಂಡಲದ ಉಪಾಧ್ಯಕ್ಷ ದಿನೇಶ್ ಆಚಾರ್ ಮಣೂರು, ಕೋಡಿ ಶಾಲೆಯ ಮುಖ್ಯ ಶಿಕ್ಷಕಿ ಸಂಪ ಟೀಚರ್ ಉಪಸ್ಥಿತರಿದ್ದರು. ಪಂಚವರ್ಣದ ಸಲಹಾ ಸಮಿತಿ ಅಧ್ಯಕ್ಷ ರವೀಂದ್ರ ಕೋಟ ಪ್ರಾಸ್ತಾವಿಕ ಮಾತನಾಡಿದರು.ಪಂಚಾಯತ್ ಸದಸ್ಯ ಕೃಷ್ಣ ಪೂಜಾರಿ ಸ್ವಾಗತಿಸಿದರು. ಕಾರ್ಯಕ್ರಮವನ್ನು ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವೀಂದ್ರ ರಾವ್ ನಿರೂಪಿಸಿ ವಂದಿಸಿದರು.