ಕೋಟ : ಕೋಟದ ಪಂಚವರ್ಣ ಯುವಕ ಮಂಡಲ (ರಿ) ಕೋಟ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಹಂದಟ್ಟು ಮಹಿಳಾ ಬಳಕ ಕೋಟ, ಮಣೂರು ಫ್ರೆಂಡ್ಸ್ ,ಜೆಸಿಐ ಕೋಟ ಲಿಜನ್ ಇವರುಗಳ ಸಹಯೋಗದೊಂದಿಗೆ ಕೋಟ ಗ್ರಾಮಪಂಚಾಯತ್ ,ಎಸ್ ಎಲ್ ಆರ್ ಎಂ ಘಟಕ ಇವರ ಸಂಯೋಜನೆಯೊಂದಿಗೆ 244ನೇ ಪರಿಸರಸ್ನೇಹಿ ಸಮರ್ಪಣಾ ಸಂಕಲ್ಪ ಅಭಿಯಾನದ ಪ್ರಯುಕ್ತ ಕೋಟ ಪಂಚಾಯತ್ ವ್ಯಾಪ್ತಿಯ ಮಣೂರು ರಾಷ್ಟ್ರೀಯ ಹೆದ್ದಾರಿ ಸ್ವಚ್ಛತಾ ಕಾರ್ಯ ನಡೆಯಿತು.

ಬಾರಿ ಪ್ರಮಾಣದ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಹೆದ್ದಾರಿಯಿಂದ ಮುಕ್ತಿಗೊಳಿಸಲಾಯಿತು. ಅಲ್ಲದೆ ಅಲ್ಲಿ ಕಸದಲ್ಲಿ ಸಿಕ್ಕ ಕೆಲವು ವಿಳಾಸಗಳನ್ನು ಸ್ಥಳೀಯಾಡಳಿತಕ್ಕೆ ನೀಡಲಾಯಿತು. ಕೋಟ ಗ್ರಾಮಪಂಚಾಯತ್, ಹಾಗೂ ಘಟಕದ ಮುಖ್ಯಸ್ಥೆ ಭವ್ಯ ಸಹಕಾರ ನೀಡಿದರು. ಮಣೂರು ಚಿತ್ತಾರಿ ಟ್ರಸ್ಟ್ ಉಪಹಾರದ ವ್ಯವಸ್ಥೆ ಕಲ್ಪಸಿ ಸ್ವಚ್ಛತೆಯಲ್ಲಿ ಭಾಗಿಯಾದರನ್ನು ಹುರಿದುಂಬಿಸಿದರು.
