ಉಡುಪಿ : ಉಡುಪಿ ಜಿಲ್ಲೆಯ ಕುಂದಾಪುರ ಸಮೀಪದ ಕೋಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೊಬೈಲ್ ಕಳೆದುಕೊಂಡಿದ್ದ ಸಾರ್ವಜನಿಕರ ದೂರುಗಳ ಆಧಾರದಲ್ಲಿ ಕೋಟ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ 13 ಮೊಬೈಲ್ ಫೋನ್ಗಳನ್ನು ಪತ್ತೆಹಚ್ಚಿ ಸಂತ್ರಸ್ತರಿಗೆ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಡಿವೈಎಸ್ಪಿ ಡಿ.ಟಿ. ಪ್ರಭು ಅವರು ಕಳೆದುಹೋದ ಮೊಬೈಲ್ಗಳನ್ನು ಸಂಬಂಧಿಸಿದವರಿಗೆ ವಿತರಿಸಿದರು.


ಮುಂದೆ ಮೊಬೈಲ್ ಕಳೆದುಕೊಂಡರೆ ಧೈರ್ಯ ಕಳೆದುಕೊಳ್ಳದೇ ಆನ್ಲೈನ್ ಅಪ್ ಮೂಲಕ ದೂರು ಸಲ್ಲಿಸಿದಲ್ಲಿ, ಪೊಲೀಸ್ ಇಲಾಖೆ ಮೊಬೈಲ್ ಪತ್ತೆಗೆ ಶ್ರಮಿಸುವುದಾಗಿ ಅವರು ಹೇಳಿದರು. ಕಾರ್ಯಕ್ರಮದಲ್ಲಿ ಕೋಟ ಠಾಣಾಧಿಕಾರಿ ಪ್ರವೀಣ್ ಕುಮಾರ್ ಟಿ ಉಪಸ್ಥಿತರಿದ್ದರು.



