Thursday, March 5, 2026

spot_img

ಕೋಟ ಪಡುಕರೆ ಲಕ್ಷ್ಮೀ ಸೋಮ ಬಂಗೇರ ಕಾಲೇಜಿನ ವಿದ್ಯಾರ್ಥಿಗಳಿಗೆ ವಿಶೇಷ ಬಸ್ ಸೌಕರ್ಯದ ವ್ಯವಸ್ಥೆ

ಕೋಟ : ಲಕ್ಷ್ಮೀ ಸೋಮ ಬಂಗೇರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಎಲ್ಲಾ ಪದವಿಯ ವಿದ್ಯಾರ್ಥಿಗಳಿಗೆ ಗೀತಾನಂದ ಫೌಂಡೇಶನ್‌ ಮಣೂರು ಇವರ ವತಿಯಿಂದ ವಿಷೇಶವಾಗಿ ಬಸ್‌ ಸೌಕರ್ಯದ ಸೌಲಭ್ಯವನ್ನು ಗೀತಾನಂದ ಫೌಂಡೇಶನ್‌ ಇದರ ಪ್ರರ್ವತಕರಾದ ಮಾನ್ಯ ಆನಂದ ಸಿ ಕುಂದರ್‌ ಉದ್ಘಾಟಿಸಿದರು.

 ಈ ಸಂದರ್ಭದಲ್ಲಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಡಾ.ರಾಜೇಂದ್ರ ಎಸ್‌ ನಾಯಕ ಇವರು ಬಸ್‌ ವ್ಯವಸ್ಥೆಯು ಪೂರ್ವಾಹ್ನ 9.30ಕ್ಕೆ ಕೋಟದಿಂದ ಕಾಲೇಜಿನ ವರೆಗೆ ಹಾಗೂ ಅಪರಾಹ್ನ 3.30ಕ್ಕೆ ಕಾಲೇಜಿನಿಂದ ಕೋಟದ ವರೆಗೆ ಈ ಸೌಲಭ್ಯವನ್ನು ಬಳಸಿಕೊಳ್ಳುವುದರ ಜೊತೆಗೆ ಸರಿಯಾದ ಸಮಯಕ್ಕೆ ಕಾಲೇಜಿನಲ್ಲಿ ಹಾಜರಿದ್ದು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ತಿಳಿಸಿದರು.

ಕಾರ್ಯಕ್ರಮದಲ್ಲಿ ವಾಣಿಜ್ಯಶಾಸ್ತ್ರ ಮುಖ್ಯಸ್ಥರಾದ ಪ್ರೊ.ಶಂಕರ ನಾಯ್ಕ್‌ ಬಿ, ಐ.ಕ್ಯೂ.ಎ.ಸಿ ಸಂಚಾಲಕರಾದ ಪ್ರೊ.ಸುಬ್ರಮಣ್ಯ ಎ,ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿಯಾದ ಪ್ರೊ.ರಮೇಶ್‌ ಆಚಾರ್‌, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡೆನಿಸ್‌ ಬಾಂಜೆ ಹಾಗೂ ಕಾಲೇಜಿನ ಬೋಧಕ ಮತ್ತು ಬೋಧಕೇತದ ಸಿಬ್ಬಂದಿಗಳು, ಬಸ್‌ ಸೌಕರ್ಯದ ಫಲಾನುಭವಿಗಳಾದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles