ಕುಂದಾಪುರ : ಕುಂದಾಪುರದ ಕೋಟೇಶ್ವರ ಕಡಲಿ ತಡಿಯ ಮರಳಿನ ಮೇಲೆ ಗೌರಿ ಗಣೇಶ್ ಹಬ್ಬ ಹಿನ್ನಲೆಯಲ್ಲಿ ಗಣಪನ ಮೂರ್ತಿಯನ್ನು ಚಿತ್ರೀಸಲಾಗಿದೆ. “ಮರಳಿನಲ್ಲಿ ಉದ್ಭವನಾದ ಗಣೇಶ” ಮರಳು ಶಿಲ್ಪಾಕೃತಿಯನ್ನು ಉಡುಪಿಯ ಸ್ಯಾಂಡ್ ಥೀಂ ತಂಡ ಈ ಕಲಾಕೃತಿಯನ್ನು ರಚಿಸಿದೆ.

ಭಾದ್ರಪದ ಶುಕ್ಲದ ಚೌತಿಯ ಸಡಗರಲ್ಲಿ ಪೂಜಿಸುವ ಉದ್ಭವ ಗಣಪತಿಯು ಮೂಷಿಕದೊಂದಿಗೆ, ಶಿವಲಿಂಗಕ್ಕೆ ಪುಷ್ಪಾರ್ಚಣೆಯ ದೃಶ್ಯವನ್ನು ಸಮಸ್ತ ನಾಡಿನ ಜನತೆಗೆ ಶುಭಾಷಯ ಸಾರುವ ಮರಳು ಶಿಲ್ಪಾಕೃತಿನ್ನು ಗಣೇಶ ಚತುರ್ಥಿಯ ಅಂಗವಾಗಿ ಹಳೆಅಲಿವೆ ಕಡಲ ತೀರ ಕೋಟೇಶ್ವರ, ಕುಂದಾಪುರದಲ್ಲಿ ರಚಿಸಲಾಗಿದೆ.

‘ಜೈ ಗಣೇಶ’ ಎಂಬ ಶೀರ್ಷಿಕೆಯೊಂದಿಗೆ 4 ಅಡಿ ಮತ್ತು 6 ಅಡಿ ಎತ್ತರ ಅಗಲಗಳುಳ್ಳ ಈ ಕಲಾಕೃತಿಯು ಆಕರ್ಷಕವಾಗಿ ಮೂಡಿಬಂದಿದೆ. ಸ್ಯಾಂಡ್ ಥೀಂ ಕಲಾವಿದರಾದ ಹರೀಶ್ ಸಾಗಾ, ಸಂತೋಷ್ ಭಟ್ ಹಾಲಾಡಿ, ಉಜ್ವಲ್ ನಿಟ್ಟೆ ಇವರು ಈ ಕಲಾಕೃತಿಯನ್ನು ರಚಿಸಿದ್ದಾರೆ.
